* ಪ್ರತಿ ವರ್ಷ ಜುಲೈ 6 ರಂದು ಮೊದಲನೇ ಝೂನೋಟಿಕ್ ಕಾಯಿಲೆಯ ಲಸಿಕೆಯಾದ 'ರೇಬಿಸ್ ಲಸಿಕೆಯ' ಅಭಿವೃದ್ಧಿಯನ್ನು ಗೌರವಿಸಲು ವಿಶ್ವ ಝೂನೋಸಸ್ ದಿನವನ್ನು ಆಚರಿಸಲಾಗುತ್ತದೆ* ವಿಶ್ವ ಝೂನೋಸಸ್ ದಿನದ ಈ ವರ್ಷದ ಥೀಮ್ - 'ಒಂದು ಜಗತ್ತು, ಒಂದು ಆರೋಗ್ಯ: ಝೂನೋಸಸ್ ನ್ನು ತಡೆಯಿರಿ, ಅದರ ಹರಡುವಿಕೆಯನ್ನು ನಿಲ್ಲಿಸಿ, ಪ್ರಾಣಿ ಸಂಕುಲವನ್ನು ರಕ್ಷಿಸಿ' ಎಂದು ಥೀಮ್ ಆಗಿದೆ.* ಝೂನೋಸಸ್ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಅದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಈ ಗಂಭೀರ ಕಾಯಿಲೆಯನ್ನು ಝೂನೋಟಿಕ್ ಕಾಯಿಲೆಗಳು ಎಂದು ಕರೆಯುತ್ತಾರೆ.* ಪ್ರಸ್ತುತ 200 ಕ್ಕೂ ಹೆಚ್ಚು ಝುನೋಟಿಕ್ ಕಾಯಿಲೆಗಳಿದ್ದು, ಅದರಲ್ಲಿ ರೇಬಿಸ್, ಎಬೋಲಾ, ಹಂದಿ ಜ್ವರ, ಫ್ಲೂ, ಹಕ್ಕಿ ಜ್ವರ ಇವೆಲ್ಲವೂ ಝೂನೋಟಿಕ್ ಕಾಯಿಲೆಗೆ ಉದಾಹರಣೆಯಾಗಿವೆ.