* ಜುಲೈ 3. ಸೋಮವಾರವು ಜಗತ್ತಿನಲ್ಲಿ ಅತಿಹೆಚ್ಚು ಬಿಸಿಲನ ತಾಪಕ್ಕೆ ಒಳಗಾದ ದಿನವಾಗಿತ್ತು ಎಂದು ಅಮೆರಿಕದ ಹವಾಮಾನ ಶಾಸ್ತ್ರಜ್ಞರು ತಿಳಿಸಿದ್ದಾರೆ.* ಜಾಗತಿಕ 17.01 ಮೇಲ್ಮನಲ್ಲಿ ಸರಾಸರಿ ತಾಪಮಾನವು ಸೆಲ್ಸಿಯಸ್ (62.6 ಡಿಗ್ರಿ ಫ್ಯಾರಸ್ಟೇಟ್) ದಾಖಲಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ (ಎನ್‌ಒಎಎ) ತಿಳಿಸಿದೆ.* ಕಳೆದ ವರ್ಷದ ಜುಲೈ 24ರಂದು ತಾಪಮಾನವು 16.92 ಸೆಲ್ಸಿಯಸ್‌ಗೆ ಏರಿಕೆಯಾಗಿದ್ದು, ಜುಲೈ 03 ರಂದು  ಸೋಮವಾರದ ತಾಪಮಾನ ಈ ದಾಖಲೆಯನ್ನು ಮೀರಿದೆ.* ಜಾಗತಿಕ ತಾಪಮಾನದ ಏರಿಳಿತದಲ್ಲಿ 1979ರಿಂದ 2000ರ ಅವಧಿಯಲ್ಲಿ ಸರಾಸರಿ ತಾಪಮಾನವು 16.2 ಸೆಲ್ಸಿಯಸ್ ದಾಖಲಾಗಿತ್ತು ಎಂದು ಎನ್‌ಒಎಎ ತಿಳಿಸಿದೆ.