* ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜುಲೈ 4)ನಡೆಯುವ ಶಾಂಘೈ ಸಹಕಾರ ಒಕ್ಕೂಟ (SCO) ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.* ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಎಲ್ಲಾ ಎಂಟು ದೇಶಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. * ಈ ವೇಳೆ ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ "ಇರಾನ್" ಅನ್ನು ಸೇರ್ಪಡೆ ಮಾಡಲಾಗುತ್ತಿದೆ.* ಈ ಬಾರಿಯ ಥೀಮ್ ಅನ್ನು 2018ರ SCO ಕಿಂಗ್ಡಾವೋ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದ ಸಂಕ್ಷಿಪ್ತ ರೂಪವಾಗಿದ್ದು, S: ಭದ್ರತೆ, E: ಆರ್ಥಿಕ ಅಭಿವೃದ್ಧಿ, C: ಸಂಪರ್ಕ, U: ಏಕತೆ, R: ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ, E: ಪರಿಸರ ರಕ್ಷಣೆ ಎಂಬುದಾಗಿದೆ.* ಶಾಂಘೈ ಸಹಕಾರ ಒಕ್ಕೂಟ (SCO) ವನ್ನು 1996 ರಲ್ಲಿ ಸ್ಥಾಪನೆ ಮಾಡಲಾಯಿತು. --> Formation - 15 June 2001--> HQ - Beijing China