* ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿಗಳ ದಿನವನ್ನು ಆಚರಿಸಲಾಗುತ್ತದೆ.* ಇತ್ತಿಚಿನ ದಿನಗಳಲ್ಲಿ ಅಳುವಿನಂಚಿನತ್ತ ಹುಲಿಯ ಸಂತತಿಯು ಸಾಗುತ್ತಿದೆ. ಕ್ಷೀಣಿಸುತ್ತಿರುವ ಹುಲಿಗಳ ಸಂಖ್ಯೆಯ ಕುರಿತಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಂತರಾಷ್ಟ್ರೀಯ ಹುಲಿಗಳ ದಿನವನ್ನು ಆಚರಿಸಲಾಗುತ್ತದೆ.* 2010 ಜುಲೈ 29ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೆಂಟ್ ಪೀಟರ್ ಬರ್ಗ್‌ನಲ್ಲಿ ಆಚರಿಸಲಾಯಿತು* ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ ಮಾಡಲಾಗುತ್ತದೆ. ಪ್ರಪಂಚದ 13 ದೇಶಗಳ ಕಾಡಿನಲ್ಲಿ ಮಾತ್ರ ಹುಲಿಗಳನ್ನು ನಾವು ಕಾಣಬಹುದಾಗಿದೆ. 2018ರ ಗಣತಿ ಪ್ರಕಾರ ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು, ಮಧ್ಯಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ, ಕರ್ನಾಟಕದಲ್ಲಿ 524 ಹುಲಿಗಳಿದ್ದು ಕರ್ನಾಟಕ ಎರಡನೇ ಸ್ಥಾನದಲ್ಲಿದೆ. * 2022ರಲ್ಲಿ ಕರ್ನಾಟಕ ರಾಜ್ಯದಲ್ಲಿ 5 ಹುಲಿ ಸಂರಕ್ಷಿತ ಪ್ರದೇಶ ಹಾಗೂ 37 ವನ್ಯ ಜೀವಿಧಾಮಗಳಲ್ಲಿ ನಡೆಸಿದ ಗಣತಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು 435 ಹುಲಿಗಳು ಪತ್ತೆಯಾಗಿವೆ.