* ಭಾರತ ಮತ್ತು ಮಂಗೋಲಿಯಾ ಸೇನಾ ಪಡೆಗಳು ಉಲನ್‌ಬಾತಾರ್‌ನಲ್ಲಿ ಇದೇ 17 ರಿಂದ 31ರವರೆಗೆ 15ನೇ ಆವೃತ್ತಿಯ ದ್ವಿಪಕ್ಷೀಯ ಮಿಲಿಟರಿ ತಾಲೀಮು ನಡೆಸಲಿದೆ ಎಂದು ಭದ್ರತಾ ಸಚಿವಾಲಯ ತಿಳಿಸಿದೆ.* ಈ ಬಾರಿಯ ಸಮರಾಭ್ಯಾಸಕ್ಕೆ 'ನೋಮ್ಯಾಡಿಕ್ ಎಲಿಫೆಂಟ್ -23'(Nomadic Elephant -23)ಎಂದು ನಾಮಕರಣ ಮಾಡಲಾಗಿದೆ.* ಸಕಾರಾತ್ಮಕ ಮಿಲಿಟರಿ ಸಂಬಂಧಗಳನ್ನು ನಿರ್ಮಿಸುವುದು, ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುವುದು, ಪರಸ್ಪರ ಕಾರ್ಯಸಾಧ್ಯತೆ, ಬೋನ್‌ಹೋಮಿ, ಸೌಹಾರ್ದತೆ ಮತ್ತು ಎರಡು ಸೇನೆಗಳ ನಡುವೆ ಸ್ನೇಹವನ್ನು ಅಭಿವೃದ್ಧಿಪಡಿಸುವುದು ಈ ಸಮರಾಭ್ಯಾಸದ ಉದ್ದೇಶವಾಗಿದೆ.* ನೋಮ್ಯಾಡಿಕ್ ಎಲಿಫೆಂಟ್ ಸಮರಾಭ್ಯಾಸ ಮಂಗೋಲಿಯ ಮತ್ತು ಭಾರತ ದೇಶಗಳ ನಡುವೆ ವಾರ್ಷಿಕವಾಗಿ ನಡೆಯುವ ಸಮರಾಭ್ಯಾಸವಾಗಿದೆ. ಕಳೆದ 2019ರ ಅಕ್ಟೋಬರ್‌ನಲ್ಲಿ ಹಿಮಾಚಲ ಪ್ರದೇಶದ ಬಾಕೋಲ್ಹ್‌ ವಿಶೇಷ ಪಡೆಗಳ ತರಬೇತಿ ಶಾಲೆಯಲ್ಲಿ ಇದನ್ನು ಆಯೋಜಿಸಲಾಗಿತ್ತು.