* ಭಾರತದ ಆಡಳಿತ ವ್ಯವಸ್ಥೆ ಹೊಸ ಮೂರು ಅಪರಾಧ ಕಾನೂನುಗಳ ಅನುಷ್ಠಾನಕ್ಕೆ ಸಜ್ಜಾಗಿದೆ. ಹಳೆಯ ಕಾನೂನುಗಳಿಗೆ ಮಹತ್ತರ ಬದಲಾವಣೆ ಮಾಡಿ ರೂಪಿಸಲಾಗಿರುವ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್), ಭಾರತೀಯ ಸಾಕ್ಷಿ ಅಧಿನಿಯಮ (ಬಿಎಸ್ಎ) ಕಾನೂನುಗಳು ಜುಲೈ 1 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.* ಇವುಗಳ ಪ್ರಚಾರಕ್ಕಾಗಿ 40 ಲಕ್ಷ ಕಾರ್ಯಕರ್ತರು, 5.65 ಲಕ್ಷ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಮುಂದಿನ ವಾರದಿಂದ ಹೊಸ ಅಪರಾಧ ಕಾನೂನುಗಳನ್ನು ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣ ಸಜ್ಜಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.* ಈಗಾಗಲೇ ಬಿಪಿಆರ್‌ಡಿ, ಜ್ಯೂಡಿಷಿಯಲ್ ಅಕಾಡೆಮಿಗಳು, ಕಾನೂನು ವಿಶ್ವವಿದ್ಯಾಲಯಗಳು ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ.* ಶೂನ್ಯ ಪ್ರಥಮ ಮಾಹಿತಿ ವರದಿ(Zero FIR), ಆನ್‌ಲೈನ್‌ನಲ್ಲಿ ಪೊಲೀಸ್ ದೂರುಗಳ ನೋಂದಣಿ, ವಿದ್ಯುನ್ಮಾನ ವಿಧಾನಗಳ ಮೂಲಕ ಸಮನ್ಸ್ ಮತ್ತು ಎಲ್ಲಾ ಘೋರ ಅಪರಾಧ ದೃಶ್ಯಗಳ ಕಡ್ಡಾಯ ವೀಡಿಯೊಗ್ರಫಿ ಜುಲೈ 1 ರಿಂದ ಜಾರಿಗೆ ಬರಲಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳ(3 New criminal laws) ಪ್ರಮುಖ ಅಂಶಗಳಾಗಿವೆ.