* ಮೂರು ಸಾವಿರ ವರ್ಷಗಳಿಗೂ ಹಳೆಯದಾದ ಈಗಲೂ ಹೊಳೆಯುತ್ತಿರುವ ಕಂಚಿನ ಖಡ್ಗ ದಕ್ಷಿಣ ಜರ್ಮನಿಯ ನೊರ್ಡ್ಡಿಂಗನ್‌ನಲ್ಲಿ ಉತ್ಪನನ ವೇಳೆ ಈ ಖಡ್ಗ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.* ಕ್ರಿ.ಪೂ 14ನೇ ಶತಮಾನದ ಅಂತ್ಯದಲ್ಲಿ ತಯಾರಾಗಿದ್ದಿರಬಹುದು ಎಂದು ಬವಾರಿಯಾ ರಾಜ್ಯದ ಐತಿಹಾಸಿಕ ವಸ್ತುಗಳ ಸಂಗ್ರಹಾಲಯ ಕಚೇರಿ ತಿಳಿಸಿದೆ.* 'ಖಡ್ಗವು ಕಂಚಿನ ಅಷ್ಟಭುಜಾಕೃತಿಯ ಹಿಡಿಕೆ ಹೊಂದಿದೆ ಒಬ್ಬ ವ್ಯಕ್ತಿ, ಮಹಿಳೆ ಮತ್ತು ಬಾಲಕನ ಸಮಾಧಿ ಅಡಿ ಇದು ಪತ್ತೆಯಾಗಿದ್ದು, ಖಡ್ಗವನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.