Job Description: * ಚಿಲ್ಲರೆ ಹಣದುಬ್ಬರ ಜನವರಿ ಯಲ್ಲಿ ಶೇ. 4.31ರಷ್ಟು ಇಳಿಕೆಯಾಗಿದ್ದು, 5 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತವಾಗಿದೆ.* ತರಕಾರಿ, ಮೊಟ್ಟೆ ಮತ್ತು ಬೇಳೆಕಾಳು ದರ ಕಡಿಮೆಯಾಗಿರುವುದೇ ಹಣದುಬ್ಬರ ತಗ್ಗಲು ಪ್ರಮುಖ ಕಾರಣ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬುಧವಾರ(ಫೆ.12) ತಿಳಿಸಿದೆ.* ಕಳೆದ ವರ್ಷದ ಅಕ್ಟೋಬರ್‌ನಿಂದಲೂ ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರ ಇಳಿಕೆ ಹಾದಿಯಲ್ಲೇ ಸಾಗಿದೆ. ಜನವರಿಯಲ್ಲಿ ಆಹಾರ ಹಣದುಬ್ಬರ ಶೇ. 6.02ರಷ್ಟು ದಾಖಲಾಗಿತ್ತು. ಕಳೆದ ಆರು ತಿಂಗಳ ಅವಧಿಯಲ್ಲಿ ದಾಖಲಾಗಿರುವ ಕನಿಷ್ಠ ಮಟ್ಟ ಇದಾಗಿದೆ. ಇಂಧನ ಹಾಗೂ ಇತರೆ ಸರಕುಗಳ ಬೆಲೆ ಕೂಡ ಗಣನೀಯವಾಗಿ ಇಳಿಕೆಯಾಗಿದೆ.* ಕಳೆದ ವಾರ ಆರ್‌ಬಿಐ ರೆಪೋ ದರದಲ್ಲಿ ಶೇ. 025ರಷ್ಟು ಕಡಿತಗೊಳಿಸುವುದಕ್ಕೆ ಇದೇ ಕಾರಣ ಎನ್ನಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ಹಣದುಬ್ಬರ ಪ್ರಮಾಣ ಇಳಿದಿದೆ. ಡಿಸೆಂಬರ್‌ನಲ್ಲಿ ಶೇ. 4.58ರಷ್ಟು ಇದ್ದ ಗ್ರಾಮೀಣ ಹಣದುಬ್ಬರ ಜನವರಿಯಲ್ಲಿ ಶೇ. 3.87ಕ್ಕೆ ಇಳಿಕೆಯಾಗಿದೆ. ಆಹಾರ ಪದಾರ್ಥಗಳ ಬೆಲೆ ಶೇ. 7.9ರಿಂದ ಶೇ. 5.53ಕ್ಕೆ ಕುಗ್ಗಿದೆ.* ತೆಂಗಿನ ಎಣ್ಣೆ ಶೇ. 54.2, ತೆಂಗಿನ ಕಾಯಿ ಶೇ. 38.71, ಬೆಳ್ಳುಳ್ಳಿ ಶೇ. 30.65 ಹಾಗೂ ಬಟಾಣಿ ಬೆಲೆಯಲ್ಲಿ ಶೇ. 30.17ರಷ್ಟು ಏರಿಕೆಯಾಗಿದೆ. ಇದಕ್ಕೆ ಹೋಲಿಸಿದರೆ ಜೀರಿಗೆ ಶೇ. 32.25, ಶುಂಠಿ ಶೇ. 30.92, ಒಣ ಮೆಣಸಿನ ಕಾಯಿ ಶೇ. 11.27, ಬದನೆಕಾಯಿ ದರಗಳು ಶೇ. 9.94ರಷ್ಟು ಇಳಿದಿದೆ.