* ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಹೆಜ್ಜೆ ಗುರುತನ್ನು ಸ್ಮರಿಸುತ್ತಾ ಪ್ರತಿ ವರ್ಷ ಜನವರಿ 23 ರಂದು ಸುಭಾಷ ಚಂದ್ರ ಬೋಸ್ ಅವರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಇದು ಅವರ ಜನ್ಮದಿನದ  127 ನೇ ವಾರ್ಷಿಕೋತ್ಸವವಾಗಿದೆ .* ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನದಂದು ಪರಾಕ್ರಮ ದಿನವನ್ನಾಗಿ ಆಚರಿಸುವುದರ ಹಿಂದಿನ ಮಹತ್ವ ಸುಭಾಷ್ ಚಂದ್ರ ಬೋಸ್ ಅವರು ಒಡಿಶಾದ ಕಟಕ್ ನಲ್ಲಿ 1897 ರ ಜನವರಿ 23 ರಂದು ಜನಿಸಿದರು.* ಬ್ರಿಟಿಷರನ್ನು ಕುರಿತಂತೆ ಕಾಂಗ್ರೆಸ್ ತಾಳಿದ್ದ ದ್ವಂದ್ವ ನೀತಿಗಳಿಂದ ಸುಭಾಸ್ ಚಂದ್ರ ಬೋಸ್ ಅವರು ಮತ್ತು ಚಿತ್ತರಂಜನ್ ದಾಸ್ ಅವರು ಜೆತೆಗೂಡಿ 'ಸ್ವರಾಜ್ ಪಕ್ಷ' ವನ್ನು ಸ್ಥಾಪಿಸಿದರು.* ನೇತಾಜಿಯವರಂತೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಸ್ಥೈರ್ಯದಿಂದ ವರ್ತಿಸಲು ಮತ್ತು ಅವರಲ್ಲಿ ದೇಶಭಕ್ತಿಯ ಉತ್ಸಾಹವನ್ನು ತುಂಬಲು ದೇಶದ ಜನರನ್ನು ವಿಶೇಷವಾಗಿ ಯುವಜನರನ್ನು ಪ್ರೇರೇಪಿಸಲು ಜನವರಿ 23 ಅನ್ನು ಪ್ರತಿ ವರ್ಷ ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತದೆ.* ಭಾರತವು ಸ್ವಾತಂತ್ರ್ಯರಾಗಲು ತನ್ನದೇ ಆದ ರೀತಿಯಲ್ಲಿ ಕೊಡುಗೆ ಹೊತ್ತ ಅಪ್ರತಿಮ ದೇಶ ಭಕ್ತರಾಗಿದ್ದ ಸುಭಾಸ್ ಬೋಸ್ ಅವರ ಜಪಾನಿನ ವಿಮಾನ ಅಪಘಾತಕ್ಕೀಡಾದ ನಂತರದಲ್ಲಿ ಆಗಸ್ಟ್ 18, 1945 ರಂದು ನಿಧನರಾದರು ಎನ್ನಲಾಗಿದೆ. * ನೇತಾಜಿ ಇನ್‌ಸ್ಟಿಟ್ಯೂಟ್ ಆಫ್ ಏಷ್ಯನ್ ಸ್ಟಡೀಸ್‌ನಿಂದ ಹಿಮಾಲಯ ಸಂಸ್ಕೃತಿ, ಭಾಷೆಗಳು ಮತ್ತು ಸಮಾಜದಲ್ಲಿ ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರವಾಗಿ ಇದನ್ನು ಪುನಃ ತೆರೆಯಲಾಯಿತು.