* 2021 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟ ರಾಷ್ಟ್ರೀಯ ಜನಗಣತಿಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಸರ್ಕಾರ ಸೆಪ್ಟೆಂಬರ್ 15 ರಂದು ಘೋಷಿಸಿತು.* ಜನಗಣತಿಯ ಜೊತೆಗೆ ಜಾತಿ ಗಣತಿಯನ್ನು ನಡೆಸೇಬೇಕೇ ಎನ್ನುವುದು ತೀರ್ಮಾನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.* 1881 ರಿಂದಲೂ ಭಾರತದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತಿದ್ದು, 2020ರ ಏಪ್ರಿಲ್ 1ರಂದೇ ಆರಂಭ ಆರಂಭವಾಗಬೇಕಿದ್ದ ಜನಗಣತಿ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು.* ಅಧಿಕಾರಿಯೊಬ್ಬರ ಪ್ರಕಾರ ಜನಗಣತಿ ಪ್ರಕ್ರಿಯೆ ನಡೆಸಲು ಅಂದಾಜು ₹ 12 ಸಾವಿರ ಕೋಟಿ ವೆಚ್ಚ ಆಗಬಹುದು. ಮುಂದೆ ನಡೆಯಲಿರುವ ಜನಗಣತಿಯು ಪ್ರಥಮ ಡಿಜಿಟಲ್ ಜನಗಣತಿ ಆಗಿರಲಿದೆ.* ಜನಗಣತಿ ನೋಂದಣಿ ಪ್ರಧಾನ ಆಯುಕ್ತಾಲಯವು ಜನಗಣತಿ ಪ್ರಕ್ರಿಯೆಗಾಗಿ ಈಗಾಗಲೇ 31 ಪ್ರಶ್ನೆಗಳನ್ನು ಸಿದ್ಧಪಡಿಸಿದೆ. ಮೊಬೈಲ್ ಫೋನ್, ಸಂಪರ್ಕವಿದೆಯೇ, ಬೈಸಿಕಲ್, ಸ್ಕೂಟರ್ ,ಮೊಪೆಡ್ ಇವೆಯೇ , ನಾಲ್ಕು ಚಕ್ರ ವಾಹನಗಳಿವೆಯೇ ಎಂಬ ಪ್ರಶ್ನೆಗಳು ಇದರಲ್ಲಿ ಸೇರ್ಪಡೆಯಾಗಿವೆ.