* ಖ್ಯಾತ ಲೇಖಕಿ, ಕಥೆಗಾರ್ತಿ, ಆಕಾಶವಾಣಿ ಕಲಾವಿದೆ ಮನೋರಮಾ ಎಂ.ಭಟ್ (92) ವಯೋಸಹಜ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಸೆ.15ರಂದು ನಿಧನರಾದರು.* ಮನೋರಮಾ ಅವರು ದಿವಂಗತ ಯಕ್ಷಗಾನ ಕಲಾವಿದ ಹಾಗೂ ಹಿರಿಯ ನ್ಯಾಯವಾದಿ ಮುಳಿಯ ಮಹಾಬಲ ಭಟ್ ಅವರ ಪತ್ನಿ.* ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ 1932 ಜುಲೈ 15ರಂದು ಜನಸಿದ್ದ ಮನೋರಮಾ ಅವರು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಲೇಖಕಿ, ಸಣ್ಣ ಕಥೆಗಾರ್ತಿಯಾಗಿ ಸಾಹಿತ್ಯ ಲೋಕಕ್ಕೆ ಕಾಲಿಟ್ಟರು. * ಮನೋರಮಾ ಅವರು ಸ್ವಯಂವರ (ಸಣ್ಣ ಕಥೆಗಳ ಸಂಗ್ರಹ), ಐಕೆ (ರೇಡಿಯೋ ನಾಟಕಗಳ ಸಂಗ್ರಹ), ನಿರ್ಧಾರ, ಹೊಸಹಾಡಿ, ನೀನು ಮತ್ತು ನಾನು, ಋಣಾನುಬಂಧ, ಚಂದ್ರಮತಿಯ ಕನಸು ಮತ್ತು ಬಲಿ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.* ವಿಧವೆಯರು ತಮ್ಮ ಮಂಗಳಸೂತ್ರವನ್ನು ತೆಗೆದುಹಾಕಬೇಕು ಎಂಬ ನಂಬಿಕೆಯ ವಿರುದ್ಧ ಅವರು ಬಲವಾದ ವಕೀಲರಾಗಿದ್ದರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದರು.* ಹೆಣ್ಣಿಗೇಕೆ ಈ ಶಿಕ್ಷೆ? ಎಂಬುದು ಅವರ ವೈಚಾರಿಕ ಬರಹ . ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ಸಾಗರದ ಹೊಸಬಾಳೆ ಅನಂತಪ್ಪ ಸೇವಾ ಪುರಸ್ಕಾರ ಪಡೆದಿದ್ದಾರೆ. ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದರು.