* ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು 'ಜಲ ಶಕ್ತಿ ಅಭಿಯಾನ: ಮಳೆ ಹಿಡಿಯಿರಿ' (ಕ್ಯಾಚ್ ದಿ ರೇನ್ ) ಕಾರ್ಯಕ್ರಮದ ಐದನೇ ಆವೃತ್ತಿಗೆ ಚಾಲನೆ ನೀಡಿದ್ದಾರೆ. * ನವದೆಹಲಿಯ ಎನ್‌ಡಿಎಂಸಿ ಸಮ್ಮೇಳನ ಕೇಂದ್ರದಲ್ಲಿ ಇತ್ತೀಚೆಗೆ ಈ ಕಾರ್ಯಕ್ರಮ ಜರುಗಿತು. 'ನಾರಿ ಶಕ್ತಿ ಸೇ ಜಲ್ ಶಕ್ತಿ' ಎಂಬ ಘೋಷವಾಕ್ಯದ ಈ ಆಂದೋಲನವು ನೀರಿನ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರದ ಮೇಲೆ ಬೆಳಕು ಚೆಲ್ಲುವ ಗುರಿ ಹೊಂದಿದೆ.* 'ಜಲ ಶಕ್ತಿ ಅಭಿಯಾನ: ಕ್ಯಾಚ್ ದಿ ರೇನ್-2024' (JSA:CTR) ಅಭಿಯಾನವನ್ನು 9ನೇ ಮಾರ್ಚ್, 2024 ರಿಂದ ನವೆಂಬರ್ 30, 2024 ರವರೆಗೆ ಜಾರಿಗೆ ತರಲಾಗುವುದು. ದೇಶದಲ್ಲಿ ಮುಂಗಾರು ಪೂರ್ವ ಮತ್ತು ಮಾನ್ಸೂನ್ ಅವಧಿಯು ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿದೆ.* ಕೇಂದ್ರ ಸಚಿವರು ವಾಸ್ತವಿಕವಾಗಿ “ಜಲ್ ಶಕ್ತಿ ಅಭಿಯಾನ 2019 ರಿಂದ 2023- ಸುಸ್ಥಿರ ಜಲ ಭವಿಷ್ಯಕ್ಕಾಗಿ ಜರ್ನಿ” ಮತ್ತು “101 ಗ್ಲಿಂಪ್ಸ್ ಆಫ್ ವುಮೆನ್ ಪವರ್: ಥ್ರೂ ದಿ ಪ್ರಿಸ್ಮ್ ಆಫ್ ಜಲ್ ಜೀವನ್ ಮಿಷನ್” ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು.* 'ಜಲ ಶಕ್ತಿ ಅಭಿಯಾನ್: ಕ್ಯಾಚ್ ದಿ ರೇನ್' ಕಾರ್ಯಕ್ರಮವು ರಾಷ್ಟ್ರೀಯ ಜಲ ಮಿಷನ್, ಜಲ ಸಂಪನ್ಮೂಲಗಳ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಮತ್ತು ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿದೆ.* ಅಭಿಯಾನದ ಪ್ರಮುಖ ಅಂಶಗಳು- ಜಲ ಮೂಲಗಳ ಹೂಳೆತ್ತುವುದು ಹಾಗೂ ಸ್ವಚ್ಛತೆ- ಅಂತರ್ಜಲ ಮರುಪೂರಣಕ್ಕಾಗಿ ಬಳಸದ/ಕಾರ್ಯನಿರ್ವಹಿಸದ ಬೋರ್‌ವೆಲ್‌ಗಳಿಗೆ ಮರುಜೀವ- ಜಲ ಮೂಲಗಳ ಜಿಯೋ ಟ್ಯಾಗಿಂಗ್ ಹಾಗೂ ಕಂದಾಯ ದಾಖಲೆಗಳ ಸಕಾಲಿಕಗೊಳಿಸುವಿಕೆ (ಅಪ್‌ಡೇಟಿಂಗ್)- ಜಲ ಮೂಲದ ಜಲಾನಯನ ಪ್ರದೇಶಗಳಲ್ಲಿ ಅರಣೀಕರಣ ಪ್ರಯತ್ನವನ್ನು ತೀವ್ರಗೊಳಿಸುವುದು- ಲಡಾಖ್‌ನಂಥ ಬೆಟ್ಟ ಪ್ರದೇಶಗಳಲ್ಲಿ ಹಿಮ ಕೊಯ್ದು ಮಾಡುವಿಕೆ- ಸಣ್ಣ ನದಿಗಳ ಪುನರುಜ್ಜಿವನ- ಮಹಿಳಾ ಜಲ ಯೋಧರು