* ಜೈನ ಸಮುದಾಯದ ದಾರ್ಶನಿಕ ಮುನಿ, ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜ ಅವರು 2024 ಫೆಬ್ರುವರಿ 18 ರಂದು (ಭಾನುವಾರ) ಮುಂಜಾನೆ ಛತ್ತೀಸಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ನಿಧನರಾದರು. ವಿದ್ಯಾಸಾಗರ ಮಹಾರಾಜರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು.* ಜೈನಮುನಿ ಆಚಾರ್ಯ ವಿದ್ಯಾಸಾಗರ ಮಹರಾಜ್ ಅವರು, 1946ರ ಅಕ್ಟೋಬರ್ 10ರಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗ ಗ್ರಾಮದಲ್ಲಿ ಜನಿಸಿದ್ದರು. ಬಳಿಕ ಜೈನಧರ್ಮ ವ್ರತ ಆಚರಣೆಗಳ ಮೂಲಕ ಛತ್ತೀಸ್‍ಗಢದ ರಾಜನಂದಗಾವ್ ಜಿಲ್ಲೆಯಲ್ಲಿರುವ ಪ್ರಖ್ಯಾತ ತೀರ್ಥಕ್ಷೇತ್ರವಾದ ದೊಂಗ್ರಾಘರ್‌ನಲ್ಲಿ ಆಚಾರ್ಯರಾಗಿದ್ದರು.* 78 ವರ್ಷದ ವಿದ್ಯಾಸಾಗರ್ ಮಹಾರಾಜ್ ಅವರು 3 ದಿನಗಳ ಹಿಂದೆ ಸಂಪೂರ್ಣ ಪ್ರಜ್ಞೆಯಲ್ಲಿದ್ದಾಗ ಶಾಶ್ವತ ಉಪವಾಸ ಕೈಗೊಂಡಿದ್ದರು. ಸಲ್ಲೇಖನರ ಜೈನ ಧಾರ್ಮಿಕ ಆಚರಣೆಯನ್ನು ಅನುಸರಿಸಿ, ಅವರು ಅಂದಿನಿಂದಲೂ ಮಾತನಾಡುವುದನ್ನು ನಿಲ್ಲಿಸಿದ್ದರು.* ಕಠಿಣ ತಪಸ್ಸು ಮತ್ತು ಧ್ಯಾನಕ್ಕೆ ಹೆಸರುವಾಸಿಯಾದ ವಿದ್ಯಾಸಾಗರ ಮುನಿ ಅವರು ಹೈಕು ಕವಿತೆಗಳನ್ನು (ಜಪಾನೀಸ್ ಕಾವ್ಯ ರೂಪ) ಮತ್ತು ಪ್ರಸಿದ್ಧ ಹಿಂದಿ ಕವಿತೆ "ಮುಕಾಮತಿ" ಯನ್ನು ಬರೆದಿದ್ದಾರೆ.* ಕರ್ನಾಟಕದಲ್ಲಿ ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಅವರು ಕೂಡ ಪವಿತ್ರ ಸಲ್ಲೇಖನ ವ್ರತದ ಮೂಲಕ ಇಹಲೋಕ ತ್ಯಜಿಸಿದ ಜೈನ ಧರ್ಮದ ಸಂತ ಶಿರೋಮಣಿ ಆಚಾರ್ಯ ಶ್ರೀ 108 ವಿದ್ಯಾಸಾಗರ ಜೀ ಮಹಾರಾಜ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಇವರು ಆಧ್ಯಾತ್ಮಿಕತೆ, ಬಡತನ ನಿವಾರಣೆ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಅನನ್ಯವಾಗಿವೆ ಎಂದು ಬಣ್ಣಿಸಿದ್ದಾರೆ.* 1968 ರಲ್ಲಿ ದಿಗಂಬರ ಸನ್ಯಾಸಿಯಾಗಿ ದೀಕ್ಷೆ ಪಡೆದ ಇವರು 1972 ರಲ್ಲಿ 'ಆಚಾರ್ಯ' ಸ್ಥಾನಮಾನವನ್ನು ಪಡೆದರು. ಅವರ ಕಠಿಣ ಜೀವನಶೈಲಿಯು ಉಪ್ಪು, ಸಕ್ಕರೆ, ಹಣ್ಣುಗಳು ಮತ್ತು ಇತರ ಕೆಲವು ಪದಾರ್ಥಗಳನ್ನು ತ್ಯಜಿಸುವುದನ್ನು ಒಳಗೊಂಡಿತ್ತು.* ಹಿಂದಿ ಪ್ರಚಾರ, ಕೈಮಗ್ಗ ಮತ್ತು ಆಯುರ್ವೇದದಲ್ಲಿಯೂ ಇವರ ಪಾತ್ರವಿದೆ. ಯೋಗಿ ಆದಿತ್ಯನಾಥ್, ರಾಜನಾಥ್ ಸಿಂಗ್, ಕಮಲ್ ನಾಥ್ ಮತ್ತು ಉಮಾ ಭಾರತಿ ಅವರಂತಹ ರಾಜಕೀಯ ನಾಯಕರು ಸೇರಿದಂತೆ ಉತ್ತರ ಭಾರತದಲ್ಲಿ ಇವರಿಗೆ ಲಕ್ಷಾಂತರ ಭಕ್ತರಿದ್ದಾರೆ.