Job Description: * ಡೆಲಾಯ್ಟ್ ಕಂಪನಿಯು ಸೋಮವಾರ (ಫೆ.19) ಬಿಡುಗಡೆಗೊಳಿಸಿರುವ ಗ್ಲೋಬಲ್ ಲಕ್ಸುರಿ ಗೂಡ್ಸ್ ಪಟ್ಟಿ 2023ರ ಪ್ರಕಾರ ಅಭರಣ ತಯಾರಿಕಾ ಕಂಪನಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಹಾಗೂ ಫ್ಯಾಷನ್ ಪರಿಕರಗಳನ್ನು ತಯಾರಿಸುವ ಟೈಟಾನ್ ಕಂಪನಿ ಸೇರಿದಂತೆ ಭಾರತದ ಪ್ರಮುಖ ನಾಲ್ಕು ಕಂಪನಿಗಳು, ಜಗತ್ತಿನ ನೂರು ಐಷಾರಾಮಿ ಬ್ರಾಂಡ್‌ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.* ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ 19ನೇ ಸ್ಥಾನ ಪಡೆದಿದೆ. ಕೇರಳದ ಕೋಯಿಕ್ಕೋಡ್ ಮೂಲದ ಈ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕಂಪನಿಯು ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.* ಟಾಟಾ ಸಮೂಹದ ಟೈಟಾನ್ 24ನೇ ಸ್ಥಾನ, ಕಲ್ಯಾಣ್ ಜುವೆಲ್ಲರ್ಸ್ 46ನೇ ಸ್ಥಾನ ಹಾಗೂ ಜೋಯಾಲುಕ್ಕಾಸ್ 47ನೇ ಸ್ಥಾನ ಪಡೆದುಕೊಂಡಿವೆ. * ಇತರ ಎರಡು ಆಭರಣ ತಯಾರಕರು, ಸೆಂಕೋ ಗೋಲ್ಡ್ & ಡೈಮಂಡ್ಸ್ ಮತ್ತು ತಂಗಮಾಯಿಲ್ ಜ್ಯುವೆಲ್ಲರಿ, ಕ್ರಮವಾಗಿ 78 ನೇ ಮತ್ತು 98 ನೇ ಸ್ಥಾನದಲ್ಲಿವೆ.* ವೈವಿಧ್ಯಮಯ ಫ್ರೆಂಚ್ ಐಷಾರಾಮಿ ಪ್ರಮುಖ LVMH ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. PVH ಕಾರ್ಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ರಿಚೆಮಾಂಟ್ ತನ್ನ ಮೂರನೇ ಸ್ಥಾನವನ್ನು ಮರಳಿ ಪಡೆದಿದೆ. * ದೇಶೀಯ ಐಷಾರಾಮಿ ಬ್ರಾಂಡ್‌ಗಳ ಏರಿಕೆಯು ಐಷಾರಾಮಿ ಸರಕುಗಳ ಮಾರುಕಟ್ಟೆಯ ವಿಕಾಸಗೊಳ್ಳುತ್ತಿರುವ ಡೈನಾಮಿಕ್ಸ್ ಅನ್ನು ಒತ್ತಿಹೇಳುತ್ತದೆ. ದೇಶೀಯ ಆರ್ಥಿಕತೆಯು ಬೆಳೆಯುತ್ತಲೇ ಇರುವುದರಿಂದ ಮತ್ತು ಗ್ರಾಹಕರ ಆದ್ಯತೆಗಳು ವಿಕಸನಗೊಳ್ಳುತ್ತಿದ್ದಂತೆ, ದೇಶದ ಐಷಾರಾಮಿ ಮಾರುಕಟ್ಟೆಯು ಗಮನಾರ್ಹ ಬೆಳವಣಿಗೆಯನ್ನು ಕಾಣುತ್ತಿದೆ, ಈ ಬ್ರ್ಯಾಂಡ್‌ಗಳ ಜಾಗತಿಕ ಮನ್ನಣೆಗೆ ಕೊಡುಗೆ ನೀಡುತ್ತಿದೆ ಎಂದು ಡೆಲಾಯ್ಟ್ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.