* ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರವು ದೇಶದ ಗಡಿಯನ್ನು ಸಮರ್ಪಣಾ ಭಾವದಿಂದ ಮತ್ತು ದೇಶಭಕ್ತಿಯಿಂದ ರಕ್ಷಿಸುವ ಅಗ್ನಿವೀರರಿಗೆ ರಾಜ್ಯ ಪೊಲೀಸ್, ಜೈಲು ಸಿಬ್ಬಂದಿ ಮತ್ತು ಅರಣ್ಯ ಸಿಬ್ಬಂದಿ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಘೋಷಿಸಿದೆ.* ಅರುಣಾಚಲ ಪ್ರದೇಶ ಸರ್ಕಾರವು ಗಗನ 'ಅಗ್ನಿಪಥ' ಯೋಜನೆ ಅಡಿಯಲ್ಲಿ ಸೇರ್ಪಡೆಯಾಗಲು ಬಯಸುವ ಯುವಕರಿಗೆ ತರಬೇತಿ ನೀಡಲಿದ್ದು, ಅಗ್ನಿಶಾಮಕ ಸೇವೆ, ಪೊಲೀಸ್ ಇಲಾಖೆಯಲ್ಲಿ ಆದ್ಯತೆ ಸಹದ ನೀಡಲಾಗುವುದು' ಎಂದು ಮುಖ್ಯ ಮಂತ್ರಿ ಪೆಮಾ ಖಂಡು ಘೋಷಿಸಿದರು.* ನೇಮಕಾತಿಗಳಲ್ಲಿ ಅಗ್ನಿವೀರರಿಗೆ ಮೀಸಲಾತಿ ನೀಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಘೋಷಿಸಿದರು.* ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರ ತೆಗೆದುಕೊಂಡಿದ್ದು, ದೇಶ ಸೇವೆ ಮಾಡಿದ ನಂತರ ಅಗ್ನಿವೀರರಿಗೆ ರಾಜ್ಯದಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ ಎಂದು ಶರ್ಮಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.* ಅಗ್ನಿವೀರರಿಗೆ ಈ ಸೇವೆಗಳಲ್ಲಿ ಎಷ್ಟು ಶೇಕಡಾ ಮೀಸಲಾತಿಯನ್ನು ನೀಡಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಲಾಗಿಲ್ಲ.