*ಜನವರಿ 2024 ರಲ್ಲಿ, ಕೇಂದ್ರ ಶಿಕ್ಷಣ ಸಚಿವಾಲಯವು 'ಪ್ರೇರಣಾ' ಕಾರ್ಯಕ್ರಮವನ್ನು ಆರಂಭಿಸಿದೆ.*ಈ ಕಾರ್ಯಕ್ರಮವು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ.ಪ್ರತಿ ವಾರ, ದೇಶದ ವಿವಿಧ ಭಾಗಗಳಿಂದ ಆಯ್ದ 20 ವಿದ್ಯಾರ್ಥಿಗಳು, ಅಂದರೆ 10 ಹುಡುಗರು ಮತ್ತು 10 ಹುಡುಗಿಯರ ಬ್ಯಾಚ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.*ಈ ಕಾರ್ಯಕ್ರಮವು ಎಲ್ಲಾ ಭಾಗವಹಿಸುವವರಿಗೆ ಅರ್ಥಪೂರ್ಣ, ಅನನ್ಯ ಮತ್ತು ಸ್ಪೂರ್ತಿದಾಯಕ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ.*ಭಾರತ ಸರ್ಕಾರದ ಈ ಉಪಕ್ರಮವು ನಾಯಕತ್ವದ ಗುಣಗಳೊಂದಿಗೆ ವಿದ್ಯಾರ್ಥಿ/ನಿ ಯರನ್ನು ಸಬಲಗೊಳಿಸುತ್ತದೆ.*ಗುಜರಾತ್‌ನ ವಡ್‌ನಗರದಲ್ಲಿರುವ ಶಾಲೆಯಿಂದ ಪ್ರೇರಣಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.*ಈ 'ಪ್ರೇರಣಾ' ಕಾರ್ಯಕ್ರಮವನ್ನು ಐಐಟಿ ಗಾಂಧಿನಗರ ಸಿದ್ಧಪಡಿಸಿದೆ.