*'ಪೃಥ್ವಿ' ಯೋಜನೆಯು ಭೂ ವಿಜ್ಞಾನ ಸಚಿವಾಲಯದ ಒಂದು ಯೋಜನೆಯಾಗಿದ್ದು, ಇತ್ತೀಚಿಗೆ  ಕೇಂದ್ರ ಸರ್ಕಾರವು ಜನವರಿ 2024 ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಿದೆ.*ಈ ಪೃಥ್ವಿ (PRITHVI) ಯೋಜನೆಯ ಪೂರ್ಣವಾದ ಹೆಸರು 'ಪೃಥ್ವಿ ವಿಜ್ಞಾನ' ಯೋಜನೆ.*ಈ ಯೋಜನೆಯು 2026 ರ ವರೆಗೆ ಜಾರಿಯಲ್ಲಿರುತ್ತದೆ.*ಪೃಥ್ವಿ ವಿಜ್ಞಾನ ಯೋಜನೆಗೆ ಕೇಂದ್ರ ಸರ್ಕಾರ ಅಂದಾಜು 4700 ಕೋಟಿ ರೂ. ಇದರ ಅಡಿಯಲ್ಲಿ 5 ಉಪ ಯೋಜನೆಗಳನ್ನು ಸೇರಿಸಲಾಗಿದೆ.*'ಪೃಥ್ವಿ' ಯೋಜನೆಯ ಉದ್ದೇಶವು ಹವಾಮಾನ ಬದಲಾವಣೆಯ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಮಾಡೆಲಿಂಗ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದ್ದಾಗಿದೆ.ಇದು ಸಂಪನ್ಮೂಲಗಳ ಹುಡುಕಾಟದಲ್ಲಿ ಭೂಮಿಯ ಧ್ರುವ ಮತ್ತು ಎತ್ತರದ ಸಮುದ್ರ ಪ್ರದೇಶಗಳ ಪರಿಶೋಧನೆಯನ್ನು ಉತ್ತೇಜಿಸುತ್ತದೆ.