Job Description: * ಅದಾನಿ ಗ್ರೂಪ್ ಈಗ ಮೆಡಿಟೆರಿನಿಯನ್ ವಲಯದಲ್ಲಿನ ಹೈಫಾ ಬಂದರನ್ನು ಖರೀದಿಸುವ ಮೂಲಕ ಇಸ್ರೇಲಿಗೂ ಪ್ರವೇಶಿಸಿದೆ. 2022 ಜುಲೈನಲ್ಲಿ ಅದಾನಿ ಪೋರ್ಟ್ಸ್ ಎಂಡ್ ಸ್ಪೆಷಲ್ ಎಕನಾಮಿಕ್ ಝೇನ್ (ಎಪಿಎಸ್‌ಇಝಡ್) ಒಕ್ಕೂಟವು ಇಸ್ರೇಲಿನ ಗಡೊಟ್ ಗ್ರೂಪ್ ಜೊತೆಗೂಡಿ ಈ ಬಂದರಿನ ಟೆಂಡರ್ ಪಡೆಯುವಲ್ಲಿ ಯಶಸ್ವಿಯಾಗಿತ್ತು. * 1.18 ಶತಕೋಟಿ ಡಾಲರ್ ಮೌಲ್ಯದಲ್ಲಿ ಈ ಬಂದರನ್ನು ಖಾಸಗೀಕರಣಗೊಳಿಸುವ ಟೆಂಡರ್‌ ಇದಾಗಿದೆ. ಜ. 11ರಂದು ಬಂದರು ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಟೆಂಡರ್‌ನಲ್ಲಿ ಅದಾನಿ ನೇತೃತ್ವದ ಒಕ್ಕೂಟ ಶೇ 70 ಹಾಗೂ ಇಸ್ರೇಲಿನ ಗಡೊಟ್ ಗ್ರೂಪ್ ಶೇ 30 ಪಾಲು ವಹಿಸಿಕೊಂಡಿವೆ. ಶಿಪ್ಪಿಂಗ್‌ ಕಂಟೈನರ್‌ಗಳು ಹಾಗೂ ಪ್ರವಾಸಿ ಹಡಗುಗಳ ಬಂದರು ಎರಡನೇ ಅತಿದೊಡ್ಡ ಬಂದರು ಆಗಿದೆ.