Job Description: ➤ ಜೂನ್ 21, 2026 ರಂದು ದೇಶಾದ್ಯಂತ ಅತ್ಯಂತ ಸಡಗರದಿಂದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು (12th International Day of Yoga) ಆಚರಿಸಲಾಯಿತು.ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಕೊಲ್ಕತ್ತಾದ ಪ್ರಸಿದ್ಧ 'ರೆಡ್ ರೋಡ್' (Red Road, Kolkata) ನಲ್ಲಿ ಸುಮಾರು 35,000 ಕ್ಕೂ ಹೆಚ್ಚು ಯೋಗಾಸಕ್ತರೊಂದಿಗೆ ಪಾಲ್ಗೊಂಡು 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದರು. 2026ರ ಯೋಗ ದಿನಾಚರಣೆಯ ಧೇಯವಾಕ್ಯ (Theme): "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" (Yoga for Healthy Ageing)➤ ಕೊಲ್ಕತ್ತಾದಲ್ಲಿ ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು: ಕೊಲ್ಕತ್ತಾದಲ್ಲಿ ಯೋಗ ಪ್ರದರ್ಶನದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಕೆಳಗಿನ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು: ಜಾಗತಿಕ ಒಕ್ಕೂಟ: "ಜೂನ್ 21 ಭೂಮಿಯ ಮೇಲಿನ ಸುದೀರ್ಘ ದಿನವಾಗಿದೆ. ಯೋಗದ ಕಾರಣದಿಂದಾಗಿ ಇಂದು ಇದು ವಿಶ್ವದ ಅತಿ ದೊಡ್ಡ ಜಾಗತಿಕ ಸಮುದಾಯ ಹಬ್ಬವಾಗಿ ಮಾರ್ಪಟ್ಟಿದೆ" ಎಂದರು. ಕೊಲ್ಕತ್ತಾದ ಮಹಾಪುರುಷರ ಸ್ಮರಣೆ: ಯೋಗ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಬಂಗಾಳದ ಪುಣ್ಯಪುರುಷರಾದ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದರು ಮತ್ತು ಲಹರಿ ಮಹಾಶಯರನ್ನು ಮೋದಿ ನೆನೆದರು. ➤ ಸಶಸ್ತ್ರ ಪಡೆಗಳು ಮತ್ತು ರಾಜತಾಂತ್ರಿಕ ವಲಯದಲ್ಲಿ ಯೋಗ: ರಕ್ಷಣಾ ಪಡೆಗಳ ಯೋಗ: ಸಿಯಾಚಿನ್ ಗ್ಲೇಸಿಯರ್‌ನ ಹಿಮಪಾತದ ಪ್ರದೇಶದಿಂದ ಹಿಡಿದು ಕಚ್‌ನ ರಣ್ ಮರುಭೂಮಿಯವರೆಗೆ ಮತ್ತು ಭಾರತೀಯ ನೌಕಾಪಡೆಯ ಯುದ್ಧನೌಕೆಗಳ ಮೇಲೂ ಭಾರತೀಯ ಸಶಸ್ತ್ರ ಪಡೆಗಳು ಯೋಗ ದಿನವನ್ನು ಆಚರಿಸಿದವು. ವಿದೇಶಿ ರಾಯಭಾರಿಗಳು: ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ನೇತೃತ್ವದಲ್ಲಿ ವಿವಿಧ ದೇಶಗಳ ರಾಯಭಾರಿಗಳು (Diplomatic Corps) ಯೋಗ ದಿನಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ರಾಷ್ಟ್ರಪತಿಗಳ ಭಾಗಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಸನ ಪ್ರದರ್ಶಿಸಿದರು. ಕರ್ನಾಟಕದಲ್ಲಿ ಯೋಗ ಸಂಭ್ರಮ: ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಅರಮನೆ ಆವರಣದಲ್ಲಿ ಸಾವಿರಾರು ಯೋಗ ಪಟುಗಳು ಒಟ್ಟಿಗೆ ಸೇರಿ ಸಾಮೂಹಿಕ ಯೋಗ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು.ಪಿಯುಸಿ (PUC) ಪಾಸ್ ಆದವರಿಗೆ ಪೊಲೀಸ್ ಆಗುವ ಸುವರ್ಣಾವಕಾಶ: 1600 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (APC) ಹುದ್ದೆಗಳಿಗೆ ಅರ್ಜಿ ಆಹ್ವಾನ;ಇಂದೇ ಅರ್ಜಿ ಸಲ್ಲಿಸಿ!