Job Description: ➤ ಭಾರತವು ಸುಸ್ಥಿರ ಇಂಧನ ಮತ್ತು ಪರಿಸರ ಸ್ನೇಹಿ ಸಾರಿಗೆಯತ್ತ ಮಹತ್ವದ ಹೆಜ್ಜೆ ಇರಿಸಿದೆ. ದೆಹಲಿಯ ಐತಿಹಾಸಿಕ 'ಸೆಂಟ್ರಲ್ ವಿಸ್ಟಾ' ಪ್ರದೇಶದಲ್ಲಿ ದೇಶದ ಮೊಟ್ಟಮೊದಲ ಹೈಡ್ರೋಜನ್ ಇಂಧನ ಚಾಲಿತ (Hydrogen Fuel Cell) ಬಸ್‌ಗಳ ಸೇವೆಯನ್ನು ಪ್ರಾರಂಭಿಸಲು ದೆಹಲಿ ಮೆಟ್ರೋ ರೈಲು ನಿಗಮ (DMRC) ಸಜ್ಜಾಗಿದೆ.➤ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್' ಭಾಗವಾಗಿ, ತೈಲ ಕಂಪನಿ (IOCL) ಸಹಯೋಗದೊಂದಿಗೆ ಈ ಬಸ್ ಸೇವೆ ಆರಂಭವಾಗುತ್ತಿದೆ. ಆರಂಭದಲ್ಲಿ ಎರಡು ಹೈಡ್ರೋಜನ್ ಬಸ್‌ಗಳು ಕರ್ತವ್ಯ ಪಥ ಮತ್ತು ಸೆಂಟ್ರಲ್ ವಿಸ್ಟಾ ಸುತ್ತಮುತ್ತಲಿನ ಪ್ರವಾಸಿ ತಾಣಗಳ ನಡುವೆ ಸಂಚರಿಸಲಿವೆ.➤ ಹೈಡ್ರೋಜನ್ ಬಸ್‌ಗಳು ಸಾಂಪ್ರದಾಯಿಕ ಡೀಸೆಲ್ ಬಸ್‌ಗಳಿಗಿಂತ ಭಿನ್ನವಾಗಿವೆ. ಇಲ್ಲಿ ಹೈಡ್ರೋಜನ್ ಅನಿಲವನ್ನು ಆಮ್ಲಜನಕದೊಂದಿಗೆ ಬೆರೆಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೇವಲ ನೀರಿನ ಹಬೆ (Water Vapour) ಮಾತ್ರ ಹೊರಬರುತ್ತದೆ, ಇದರಿಂದ ಯಾವುದೇ ವಾಯು ಮಾಲಿನ್ಯವಾಗುವುದಿಲ್ಲ.➤ ರಾಷ್ಟ್ರೀಯ ವಸ್ತುಸಂಗ್ರಾಲಯ, ಇಂಡಿಯಾ ಗೇಟ್ ಹಾಗೂ ರಾಷ್ಟ್ರಪತಿ ಭವನದಂತಹ ಸೆಂಟ್ರಲ್ ವಿಸ್ಟಾ ಭಾಗಗಳಲ್ಲಿ ಪ್ರವಾಸಿಗರಿಗಾಗಿ ಸಂಚರಿಸಲಿರುವ ಈ ಬಸ್‌ಗಳ ಕಾರ್ಯಾಚರಣೆಯ ಜವಾಬ್ದಾರಿಯನ್ನು ದೆಹಲಿ ಮೆಟ್ರೋ (DMRC) ಹೊತ್ತುಕೊಂಡಿದ್ದು, ಇವು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಹಾಗೂ ಸೈಲೆಂಟ್ ಕಾರ್ಯಾಚರಣೆಯನ್ನು ಒಳಗೊಂಡಿರುವುದಲ್ಲದೆ, ಸಂಪೂರ್ಣವಾಗಿ 'ಶೂನ್ಯ ಹೊರಸೂಸುವಿಕೆ' (Zero Emission) ತಂತ್ರಜ್ಞಾನದೊಂದಿಗೆ ಪರಿಸರ ಸ್ನೇಹಿಯಾಗಿದ್ದು ದೆಹಲಿಯ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಪೂರಕವಾಗಿವೆ.