➤ ವಿಶ್ವಸಂಸ್ಥೆ (UN): ಜಾಗತಿಕ ವೇದಿಕೆಯಲ್ಲಿ ಭಾರತವು ತನ್ನ ಆರ್ಥಿಕ ಶಿಸ್ತು ಮತ್ತು ಅಂತರರಾಷ್ಟ್ರೀಯ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 2026ನೇ ಸಾಲಿನ ವಿಶ್ವಸಂಸ್ಥೆಯ ನಿಯಮಿತ ಬಜೆಟ್‌ಗೆ (Regular Budget) ತನ್ನ ಪಾಲಿನ ವಂತಿಕೆಯನ್ನು ನಿಗದಿತ ಸಮಯಕ್ಕಿಂತ ಮೊದಲೇ ಪಾವತಿಸುವ ಮೂಲಕ ಭಾರತವು ಪ್ರತಿಷ್ಠಿತ 'ಗೌರವ ಪಟ್ಟಿ' (Honour Roll) ಸೇರ್ಪಡೆಯಾಗಿದೆ.➤ 2026ನೇ ಸಾಲಿನ ವಿಶ್ವಸಂಸ್ಥೆಯ ನಿಯಮಿತ ಬಜೆಟ್‌ಗೆ ಭಾರತವು 35.18 ಮಿಲಿಯನ್ ಡಾಲರ್ (ಸುಮಾರು ₹293 ಕೋಟಿಗೂ ಅಧಿಕ) ಮೊತ್ತವನ್ನು ಫೆಬ್ರವರಿ 3, 2026 ರಂದು ಸಕಾಲದಲ್ಲಿ ಪಾವತಿಸಿದೆ. ಈ ಮೂಲಕ ನಿಗದಿತ 30 ದಿನಗಳ ಅವಧಿಯೊಳಗೆ ವಂತಿಗೆ ಪೂರ್ಣಗೊಳಿಸಿದ ವಿಶ್ವದ ಕೇವಲ 47 ಸದಸ್ಯ ರಾಷ್ಟ್ರಗಳ ಪ್ರತಿಷ್ಠಿತ 'ಗೌರವ ಪಟ್ಟಿ'ಯಲ್ಲಿ (Honour Roll) ಭಾರತ ಸ್ಥಾನ ಪಡೆದಿದೆ. 2024 ಮತ್ತು 2025 ರಲ್ಲೂ ಸತತವಾಗಿ ಈ ಸಾಧನೆ ಮಾಡಿರುವ ಭಾರತವು, ವಿಶ್ವಸಂಸ್ಥೆಯ ಹಣಕಾಸು ಸ್ಥಿರತೆ ಮತ್ತು ಜಾಗತಿಕ ಜವಾಬ್ದಾರಿಯನ್ನು ಕಾಪಾಡುವಲ್ಲಿ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ.➤ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರರಾದ ಸ್ಟೀಫನ್ ಡುಜಾರಿಕ್ ಅವರು ಭಾರತದ ಈ ಶಿಸ್ತನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ಹೆಮ್ಮೆಯ 'ಏಕತಾ ಪ್ರತಿಮೆ' (Statue of Unity) ಯನ್ನು ವಿಶೇಷವಾಗಿ ಸ್ಮರಿಸಿದ್ದು, "ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಹೊಂದಿರುವ ದೇಶದಿಂದ ಈ ಕೊಡುಗೆ ಬಂದಿರುವುದು ಸಂತೋಷದ ವಿಷಯ" ಎಂದು ತಿಳಿಸಿದ್ದಾರೆ.KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ