* ಸಮರ್ಥ ಇಂಗಾಲ ನಿರ್ವಹಣೆ ಮತ್ತು ಸುಸ್ಥಿರತೆಗಾಗಿ ಏರ್ಪೋರ್ಟ್ ಕಾರ್ಬನ್ ಮಾನ್ಯತೆ (ACA) ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Kempe Gowda International Airport, Bengaluru) ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ (ACI) ನ ಅತ್ಯುನ್ನತ ಮಟ್ಟದ ಲೆವೆಲ್ 4+ ಟ್ರಾನ್ಸಿಶನ್ ಮಾನ್ಯತೆಯನ್ನು ಪಡೆದುಕೊಳ್ಳುವ ಮೂಲಕ ಹಸಿರು ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.* ಲೆವೆಲ್ 4+ ಟ್ರಾನ್ಸಿಶನ್ ಮಾನ್ಯತೆ ಏರ್‌ಪೋರ್ಟ್ ಕಾರ್ಬನ್ ಮಾನ್ಯತೆ ಕಾರ್ಯಕ್ರಮದ ಅಡಿಯಲ್ಲಿ ವಿಮಾನ ನಿಲ್ದಾಣವು ಪಡೆಯಬಹುದಾದ ಅತ್ಯುನ್ನತ ಪುರಸ್ಕಾರಗಳಲ್ಲಿ ಇದು ಒಂದಾಗಿದ್ದು, ಇದರಲ್ಲಿ 2030 ರ ವೇಳೆಗೆ ನಿವ್ವಳ ಇಂಗಾಲ ಶೂನ್ಯವಾಗಲು BIAL ನ ಆಕಾಂಕ್ಷೆಯನ್ನು ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವಲ್ಲಿ ಅದರ ನಿರಂತರ ಪ್ರಯತ್ನಗಳನ್ನು ತೋರಿಸುತ್ತದೆ.