* ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ 'ಹಸೀನಾ ಮತ್ತು ಇತರ ಕತೆಗಳು' ಕಥಾ ಸಂಕಲನದ ಆಂಗ್ಲ ಅನುವಾದಿತ 'ಹಸೀನಾ ಅಂಡ್ ಅದರ್ ಸ್ಟೋರೀಸ್' ಕೃತಿಯು 2024 ನೇ ಸಾಲಿನ 'ಇಂಗ್ಲಿಷ್ ಪೆನ್' ಪ್ರಶಸ್ತಿಗೆ ಆಯ್ಕೆಯಾಗಿದೆ.* ಈ ಪ್ರಶಸ್ತಿಯು ಸುಮಾರು 2.25 ಲಕ್ಷಕ್ಕೂ ಹೆಚ್ಚು ನಗದು ಬಹುಮಾನವನ್ನು ಮತ್ತು ಫಲಕವನ್ನು ಒಳಗೊಂಡಿದೆ.* ಸಮಕಾಲೀನ ಮಹಿಳೆಯರು ಎದುರಿಸುವ ವಾಸ್ತವಗಳನ್ನು ಅಪರೂಪದ ಪ್ರತಿಭೆ ಹಾಗು ಕಲೆಯ ಮೂಲಕ ಬಾನು ಮುಷ್ತಾಕ್ ಅವರು ಅನಾವರಣಗೊಳಿಸಿದ್ದಾರೆ. * ದೀಪಾ ಬಸ್ತಿ ಅವರ ಕೃತಿಯಲ್ಲಿನ ಧ್ವನಿ, ಸಂದರ್ಭಗಳು ಹಾಗು ಅನುಭವವನ್ನು ದೀಪಾ ಬಸ್ತಿ ಅವರ ಅತ್ಯುತ್ತಮ ಅನುವಾದ ಭಾರತ ಹಾಗು ಜಾಗತಿಕ ಇಂಗ್ಲಿಷ್ ಓದುಗರಿಗೆ ತಲುಪಿಸಿದೆ ಎಂದು ಪೆನ್ ಪ್ರಶಸ್ತಿ ಸಮಿತಿ ತಿಳಿಸಿದೆ.* 90 ದೇಶಗಳಲ್ಲಿ 130 ಕೇಂದ್ರಗಳಿರುವ ಪೆನ್ ಇಂಟರ್ ನ್ಯಾಷನಲ್ ಎಂಬ ಜಾಗತಿಕ ಲೇಖಕರ ಸಂಘವನ್ನು ಇದೇ 'ಇಂಗ್ಲಿಷ್ ಪೆನ್' ಸ್ಥಾಪಿಸಿದೆ.* ಇಂಗ್ಲಿಷ್ ಪೆನ್ ಮೂರು ವಾರ್ಷಿಕ ಪ್ರಶಸ್ತಿಗಳನ್ನು ನಡೆಸುತ್ತದೆ. ಅವುಗಳೆಂದರೆ PEN ಪಿಂಟರ್ ಪ್ರಶಸ್ತಿ , PEN ಹೆಸ್ಸೆಲ್-ಟಿಲ್ಟ್‌ಮ್ಯಾನ್ ಪ್ರಶಸ್ತಿ , ಮತ್ತು PEN/Ackerley ಪ್ರಶಸ್ತಿಗಳಾಗಿವೆ.