Job Description: * ನಾಸಾದ ಜೇಮ್ಸ್ ವೆಬ್ ದೂರದರ್ಶಕ ಅತ್ಯಂತ ಚಿಕ್ಕ ಕ್ಷುದ್ರ ಗ್ರಹವೊಂದನ್ನು ಪತ್ತೆ ಮಾಡಿದೆ. ಅದು ರೋಮ್‌ನ ಕೊಲೊಸಿಯಂನಷ್ಟು ಗಾತ್ರದ್ದಾಗಿದೆ. ಅಂದರೆ 300 ಮತ್ತು 650 ಅಡಿ ಅಥವಾ 100 ಹಾಗೂ 200 ಮೀಟರ್ ಉದ್ದವಾಗಿದೆ ಎಂದು ಯುರೋಪ್‌ನ ಖಗೋಳತಜ್ಞರ ತಂಡ ಹೇಳಿದೆ. * ಜೇಮ್ಸ್ ವೆಬ್ ದೂರದರ್ಶಕ ಇದುವರೆಗೆ ಪತ್ತೆ ಮಾಡಿದ ಅತ್ಯಂತ ಚಿಕ್ಕ ವಸ್ತು ಇದಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮಂಗಳ ಮತ್ತು ಗುರು ಗ್ರಹಗಳ ನಡುವಿನ ಮುಖ್ಯ ಕ್ಷುದ್ರ ಗ್ರಹ ಪಟ್ಟಿಯಲ್ಲಿನ ಅತಿ ಕಡಿಮೆ ಉದ್ದದ (0.6 ಮೈಲು ಅಥವಾ 1 ಕಿಲೋ ಮೀಟರ್) ವಸ್ತುವಿಗೆ ಉದಾಹರಣೆಯಾಗಿದೆ.