Job Description: * ಫೆಬ್ರವರಿ 1, 2023ರ ಕೇಂದ್ರ ಬಜೆಟ್ ಮಂಡನೆಗೆ ತೆರೆ ಮರೆಯ ತಯಾರಿ ನಡೆಯುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಐದನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆಗೆ ಸಿದ್ಧಗೊಳ್ಳುತ್ತಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಹಲವು ಜನರ ನಿರೀಕ್ಷೆಗಳನ್ನು ಪೂರೈಸುವ ಜವಾಬ್ದಾರಿ ಜೊತೆಗೆ ಹಣದುಬ್ಬರ ನಿಯಂತ್ರಣಕ್ಕೆ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ವಿತ್ತ ಸಚಿವೆಗೆ ಪ್ರಮುಖ ಸವಾಲಾಗಿದೆ. * ಕೇಂದ್ರ ಬಜೆಟ್‌ನಲ್ಲಿ ಅವರು ಮಂಡಿಸಲಿರುವ ಹಣಕಾಸಿನ ನೀತಿಗಳು ಮತ್ತು ತೆರಿಗೆ ನಿರ್ಬಂಧಗಳಂತಹ ನಿರ್ಧಾರಗಳನ್ನ ಘೋಷಿಸಬಹುದು. ಈ ಕ್ರಮಗಳು ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಬಹುದು. ಗಗನಕ್ಕೇರುತ್ತಿರುವ ಬೆಲೆಗಳನ್ನ ತಗ್ಗಿಸುವುದರ ಸವಾಲಿನ ಜೊತೆಗೆ ಹಣದುಬ್ಬರ ನಿಯಂತ್ರಿಸುವ ಗುರಿ