• ಕರ್ನಾಟಕ ರಾಜ್ಯವು ಆರು ವರ್ಷದ ಒಳಗಿನ ಎಲ್ಲಾ ಮಕ್ಕಳ ಮಾನಸಿಕ, ಬೌದ್ಧಿಕ ಬೆಳವಣಿಗೆಗಾಗಿ ಮತ್ತು ಮಕ್ಕಳ ಆರೋಗ್ಯ ಆರೈಕೆಗೆ ಪೂರಕವಾಗಿ " ಹಲೋ ಪೋಷಕರೇ " ಎಂಬ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ.• ಮಕ್ಕಳ ಪೋಷಣೆ ಕುರಿತು ಪೋಷಕರಿಗಾಗಿ ತಿಳುವಳಿಕೆ ಮತ್ತು ಸಲಹೆ ನೀಡಲು ಮೊಬೈಲ್ ಆಧಾರಿತ ವಿಶಿಷ್ಟ ಯೋಜನೆ ಇದಾಗಿತ್ತು, ಇದನ್ನು " ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು " ಜಾರಿಗೆ ತಂದಿದೆ.• ಸದ್ಯಕ್ಕೆ ಇದನ್ನು ಪ್ರಾಯೋಗಿಕವಾಗಿ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ಗೊಳಿಸಿದ್ದಾರೆ.• ಈ ಯೋಜನೆಯ ಅಡಿಯಲ್ಲಿ ಪೋಷಕ ಮತ್ತು ಪಾಲಕರಿಗೆ" ಸರಳ ಹಾಗೂ ಅನುಷ್ಠಾನ ಯೋಗ್ಯ ಉಚಿತ ಸಲಹೆ, ಮಾರ್ಗದರ್ಶನ ಮತ್ತು ಮಾಹಿತಿಗಳನ್ನು ಒಳಗೊಂಡ ಸಮರ್ಪಕ ಸಹಾಯವನ್ನು ನೀಡಲಾಗುವುದು.