• ಲಂಡನ್ ನಲ್ಲಿ ನಡೆದ ಅಂತರಾಷ್ಟ್ರೀಯ ಟೆನ್ನಿಸ್ ಫೆಡರೇಶನ್ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಖ್ಯಾತ ಟೆನ್ನಿಸ್ ಕ್ರೀಡಾಪಟುಗಳಾದ ಸರ್ಬಿಯಾದ ಜೋಕೋವಿಕ್ ಮತ್ತು ಬೆಲಾರಸ್ ನ ಸಬಲೆಂಕಾ ಪಡೆದುಕೊಂಡರು.• ಎಟಿಪಿ ವಿಶ್ವರಾಂಕಿಂಗ್ ನಲ್ಲಿ ಸತತವಾಗಿ ಎಂಟನೇ ಬಾರಿಗೆ ಅಗ್ರಸ್ಥಾನದೊಂದಿಗೆ ಸಾಧನೆ ಮಾಡಿರುವ ಜೋಕೋವಿಕ್ ಈ ವರ್ಷ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ಯುಎಎಸ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ.• ಇತ್ತೀಚಿಗೆ ನಡೆದ ವಿಂಬಲ್ಡ್ ನಲ್ಲಿ ರನ್ನರ್ ಅಪ್ ಕೂಡ ಆಗಿದ್ದರು.• ಜೋಕೋವಿಕ್ ಅವರು ITF ನ ವಿಶ್ವ ಚಾಂಪಿಯನ್ ಆಗುತ್ತಿರುವುದು ಇದು ಎಂಟನೇ ಬಾರಿ.• ಸಬಲೆಂಕಾ ಅವರು ITF ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದಿರುವುದು ಇದು ಮೊದಲನೇ ಬಾರಿ ಮತ್ತು ಇದನ್ನು ಹೊರತುಪಡಿಸಿ ಇವರು ಆಸ್ಟ್ರೇಲಿಯಾ ಓಪನ್ ಚಾಂಪಿಯನ್, ಯು ಎ ಎಸ್ ಓಪನ್ ನಲ್ಲಿ ರನ್ನರ್ ಅಪ್ ಮತ್ತು ಫ್ರೆಂಚ್ ಓಪನ್ ನಲ್ಲಿ ಸೆಮಿ ಫೈನಲ್ ಗೆ ಪ್ರವೇಶಿಸಿದರು.