* ಹಳೆಯ ಸಂಸತ್ತಿನ ಕಟ್ಟಡದಲ್ಲಿರುವ ಐತಿಹಾಸಿಕ ಸೆಂಟ್ರಲ್ ಹಾಲ್ನಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರನ್ನು ಉದ್ದೇಶಿಸಿ ಪ್ರಧಾನಿ ನರೇದ್ರ ಮೋದಿ ಅವರು ಹಳೆ ಸಂಸತ್ ಭವನವನ್ನು 'ಸಂವಿಧಾನ ಸದನ್' ಎಂದು ಸೆಪ್ಟೆಂಬರ್ 19 ರಂದು ಮರು ನಾಮಕರಣ ಮಾಡಿದ್ದರು. * ಮೋದಿಯವರು ಭಾಷಣ ಮಾಡುವ ವೇಳೆ ಇತಿಹಾಸ ನಿರ್ಮಿಸಿದ ನಮ್ಮ ಪೂರ್ವಿಕ ನಾಯಕರ ಸ್ಮರಣಾರ್ಥ ಹಾಗು ಅವರಿಗೆ ಗೌರವ ಸಲ್ಲಿಸಲು ಹಳೆ ಸಂಸತ್ ಭವನಕ್ಕೆ ಸಂವಿಧಾನ ಸಧನ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಪ್ರಧಾನಿ ಮೋದಿಯವರು ತಿಳಿಸಿದ್ದಾರೆ. * ಹೊಸ ಸಂಸತ್ ಭವನ ಉದ್ಘಾಟನೆಗೊಂಡ ಬಳಿಕ ಇದೆ ಮೊದಲ ಬಾರಿಗೆ ಸೆ.20 ರಿಂದ ಅಧಿವೇಶನ  ಆರಂಭವಾಗಲಿದ್ದು 5 ದಿನಗಳ ಕಾಲ ನಡೆಯಲಿದೆ.* ಸೆ.20 (ಇಂದು) ಪ್ರಧಾನಿ ನರೇಂದ್ರ ಮೋದಿ ಸೇರಿ ಎಲ್ಲ ಸಂಸದರು ನೂತನ ಸಂಸತ್ ಭವನವನ್ನು ಪ್ರವೇಶಿಸಿದರು ಈ ವೇಳೆ ಸಂಸತ್ತಿಗೆ ಸಂಭಂದಿಸಿದೆ ಪುಸ್ತಕಗಳು, ಸ್ಮರಣಾರ್ಥ ನಾಣ್ಯ ಹಾಗೂ ಅಂಚೆ ಚೀಟಿಗಳನ್ನು ಉಡುಗರೆಯಾಗಿ ಸ್ವೀಕರಿಸಿದರು.