*ಯುನೆಸ್ಕೊ (UNESCO) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೊಯ್ಸಳ ದೇವಾಲಯಗಳನ್ನು (Hoysala Temples Karnataka) ಸೇರ್ಪಡೆ ಮಾಡಲಾಗಿದೆ.* ಶಿಲ್ಪಕಲೆಯಲ್ಲಿ ಜಗತ್ಪ್ರಸಿದ್ದಿ ಪಡೆದಿರುವ ಹೊಯ್ಸಳರ ಕಾಲದಲ್ಲಿ ಕೆತ್ತನೆಗೊಂಡ ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು ಹಾಗೂ ಮೈಸೂರು ಜಿಲ್ಲೆ,ತಿ.ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಿಸಲಾಗಿದೆ.* ಕರ್ನಾಟಕ ರಾಜ್ಯದ ನಾಲ್ಕು ತಾಣಗಳು ಸೇರಿದಂತೆ ದೇಶದ 42 ಸ್ಥಳಗಳು ಯುನೆಸ್ಕೊ ಪಟ್ಟಿಗೆ ಸೇರಿಸುವ ಮೂಲಕ ಜಾಗತಿಕ ಪಾರಂಪರಿಕ ಸ್ಥಾನ ಪಡೆದ ಪಟ್ಟಿಯಲ್ಲಿ ಭಾರತ 6 ನೇ ಸ್ಥಾನದಲ್ಲಿದೆ.* 12-13 ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳ ಶೈಲಿಯ ಶಿಲ್ಪಕಲಾ ದೇಗುಲಗಳು, ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಮೂರು ದೇವಾಲಯಗಳಿಂದ ಇಲ್ಲಿ ಪ್ರತಿನಿಧಿಸಲ್ಪಟ್ಟಿದೆ.* ಯುನೆಸ್ಕೊ ತಾತ್ಕಾಲಿಕ ಪಟ್ಟಿಯಲ್ಲಿ ರಾಜ್ಯದ ಶ್ರೀ ರಂಗಪಟ್ಟಣ ಕೋಟೆ ಹಾಗೂ ವಿಜಯಪುರದ ಗೋಲ್ ಗುಂಬಜ್ ಸೇರಿವೆ.* ಯುನೆಸ್ಕೊ ಎಂದರೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಇದು 1946 ನವೆಂಬರ್ 4 ರಿಂದ ಕಾರ್ಯಾರಂಭವಾಗಿದ್ದು, ಇದರ ಪ್ರದಾನ ಕಚೇರಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನ ಪ್ಲೇಸ್ ಡೆ ಪ್ಯಾಂಟೇನಯನಲ್ಲಿದೆ.* ಬ್ಯಾರಿಯರ್ ರೀಫ್, ಈಕ್ವೆಡಾರ್ ನ ಗ್ಯಾಲಪಗೋಸ್, ಭಾರತದ ತಾಜಮಹಲ್, ಅಮೆರಿಕಾದ ಗ್ರಾಂಡ್ ಕ್ಯಾನ್ಯನ್, ಗ್ರೀಕನ್ ಆಕ್ರೊಪೊಲಿಸ್ ಸೇರಿದಂತೆ ಒಟ್ಟು 1173 ಸ್ಥಳಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.