Job Description: * ಎರಡು ದಶಕಗಳ ವೃತ್ತಿಜೀವನ ಹೊಂದಿರುವ ದಕ್ಷಿಣ ಆಫ್ರಿಕಾದ 39 ವರ್ಷದ ಆಮ್ಲಾ ರವರು ಕ್ರಿಕೆಟ್ ನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. ವೃತ್ತಿಪರ ಸ್ವರೂಪಗಳಲ್ಲಿ ಬರೋಬ್ಬರಿ 34,104 ರನ್‌ಗಳನ್ನು ಗಳಿಸಿದ್ದಾರೆ.* ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ ಹಾಶಿಮ್ ಆಮ್ಲಾ, ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಲ್ಲಿ ಹೆಚ್ಚು ದಾಖಲೆಗಳನ್ನು ನಿರ್ಮಿಸಿರುವ ಆಟಗಾರರಲ್ಲಿ ಆಮ್ಲಾ ಕೂಡಾ ಒಬ್ಬರು. ಎಬಿಡಿ ಸಮಕಾಲೀನರಾದ ಆಮ್ಲಾ, ಹರಿಣಗಳ ಪರ ಅಪಾರ ಅಂಕೆ ಸಂಖ್ಯೆಗಳಲ್ಲಿ ದಾಖಲೆ ನಿರ್ಮಿಸಿದ್ದಾರೆ.