* ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಶ್ವಾನಗಳು ವೃದ್ಧಾಪ್ಯ ಅಥವಾ ಇತರ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅನರ್ಹಗೊಂಡಾಗ ಅವುಗಳ ಪಾಲನೆ, ಪೋಷಣೆಗಾಗಿ ಗುಜರಾತ್‌ನ ಆನಂದ್‌ ಜಿಲ್ಲೆಯಲ್ಲಿ 'ನಿವೃತ್ತ ಪೊಲೀಸ್ ಶ್ವಾನಗಳ ವಿಶ್ರಾಂತಿ ಧಾಮ'ವನ್ನು ಆರಂಭಿಸಲಾಗಿದೆ.* ಈ ಶ್ವಾನಗಳಿಗೆ ವಸತಿ, ಆಹಾರ ಮತ್ತು ಆರೋಗ್ಯ ಸೌಲಭ್ಯಗಳು ದೊರೆಯಲಿವೆ ಎಂದು ಡಿಎಸ್‌ಪಿ ಜೆ.ಜೆ.ಚೌಧರಿ ಅವರು ಮಾಹಿತಿ ತಿಳಿಸಿದ್ದಾರೆ.* 'ಪೊಲಿಸ್ ಇಲಾಖೆಯ ನಿವೃತ್ತ ಶ್ವಾನಗಳಿಗಾಗಿಯೇ ಆ ಸ್ಥಾಪಿಸಲಾಗಿರುವ ಈ ವಿಶ್ರಾಂತಿ ಧಾಮವು ದೇಶ ದಲ್ಲಿಯೇ ಮೊದಲನೇಯದು. ಪ್ರಸ್ತುತ ಇಲ್ಲಿ 16 ನಿವೃತ್ತ ಶ್ವಾನಗಳು ಕರ್ತವ್ಯದಲ್ಲಿರುವ ಎರಡು ಮತ್ತು ತರಬೇತಿ ಪಡೆಯುತ್ತಿರುವ ಎರಡು ಶ್ವಾನಗಳು ಸೇರಿ ಒಟ್ಟು 20 ಶ್ವಾನಗಳಿವೆ' ಎಂದು ಜೆ.ಜೆ.ಚೌಧರಿ ಅವರು ತಿಳಿಸಿದ್ದಾರೆ.* ಪೊಲೀಸ್ ಶ್ವಾನದಳದ ನಿವೃತ್ತ ಸದಸ್ಯರಿಗಾಗಿ 23 ಕೊಠಡಿಗಳಿವೆ. ಅಲ್ಲದೆ ಕರ್ತವ್ಯದಲ್ಲಿರುವ ಶ್ವಾನಗಳಿಗೆ ಮೂರು ಕೊಠಡಿಗಳಿವೆ. ಆಹಾರ, ವೈದ್ಯಕೀಯ ಆರೈಕೆ ಒದಗಿಸುವ ಜತೆಗೆ ಸ್ವಚ್ಛತೆಗೆ ಒತ್ತು ನೀಡಲಾಗಿದೆ.* ಪ್ರತಿ ಶ್ವಾನಕ್ಕೆ ನಿತ್ಯ 700 ಗ್ರಾಂ ಹಾಲು, 170 ಗ್ರಾಂ ರೊಟ್ಟಿ, ಬೆಳಿಗ್ಗೆ ಒಂದು ಮೊಟ್ಟೆ, ಸಂಜೆ 280 ಗ್ರಾಂ – ಕುರಿ ಮಾಂಸ, ತರಕಾರಿ ಮತ್ತು ಅನ್ನ ನೀಡಲಾಗುತ್ತದೆ ” ಎಂದು ಚೌಧರಿ ಅವರು ತಿಳಿಸಿದ್ದಾರೆ.* ಪೊಲೀಸ್ ಶ್ವಾನದಳದ ಎಲ್ಲ ಶ್ವಾನಗಳನ್ನು 15 ದಿನಕ್ಕೊಮ್ಮೆ - ಪಶು ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸುತ್ತಾರೆ. ತುರ್ತು ಚಿಕಿತ್ಸೆಯ ಅಗತ್ಯವಿದ್ದರೆ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ವಾಹನ ವ್ಯವಸ್ಥೆಯೂ ಇಲ್ಲಿದೆ ಎಂದು ತಿಳಿಸಿದರು.* ಶನಿವಾರ, ಭಾನುವಾರ ಮತ್ತು - ಸಾರ್ವಜನಿಕ ರಜಾ ದಿನಗಳಲ್ಲಿ ಈ ಶ್ವಾನಗಳ ಭೇಟಿ ನೀಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಶ್ವಾನಗಳನ್ನು ನಿತ್ಯ ಬೆಳಿಗ್ಗೆ ಮತ್ತು ಸಂಜೆ ಆಡಲು ಬಿಡಲಾಗುತ್ತದೆ.  ಆಗ ಜನರು ಇವುಗಳೊಂದಿಗೆ ಕಾಲ ಕಳೆಯಬಹುದು ಮತ್ತು ಅವುಗಳಿಗೆ ಆಹಾರನೀಡಬಹುದಾಗಿದೆ ಎಂದು ಚೌಧರಿ ಹೇಳಿದರು.