Job Description: * 145 ದೇಶಗಳ ಸೇನಾ ಸಾಮರ್ಥ್ಯ ಪರಿಗಣಿಸಿ ಗ್ಲೋಬಲ್ ಫೈರ್‌ ಪವರ್‌ 2024ನೇ ಸಾಲಿನ ಪ್ರಬಲ ಸೇನಾಪಡೆಗಳ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಮಾಡಿದೆ, ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ, ಅಮೇರಿಕ ಮೊದಲನೇ ಸ್ಥಾನದಲ್ಲಿದೆ.* ಗ್ಲೋಬಲ್ ಫೈರ್‌ ಪವರ್‌ ನ 2024 ರ ಮಿಲಿಟರಿ ಸಾಮರ್ಥ್ಯದ ಶ್ರೇಯಾಂಕವನ್ನು ಜಾಗತಿಕ ಮಿಲಿಟರಿ ಸಾಮರ್ಥ್ಯದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ.* ಮಿಲಿಟರಿ ಸಂಪನ್ಮೂಲಗಳು, ನೈಸರ್ಗಿಕ ಸಂಪನ್ಮೂಲಗಳು, ಉದ್ಯಮ ಮತ್ತು ಭೌಗೋಳಿಕ ಲಕ್ಷಣಗಳು ಮತ್ತು ಲಭ್ಯವಿರುವ ಮಾನವಶಕ್ತಿ ಸೇರಿದಂತೆ ಹಲವಾರು ನಿಯತಾಂಕಗಳ ಮೇಲೆ ದೇಶಗಳನ್ನು ನಿರ್ಣಯಿಸಿದ ನಂತರ ಸೂಚ್ಯಂಕದ ಶ್ರೇಯಾಂಕವನ್ನು ತಯಾರಿಸಲಾಗಿದೆ.* ಭಾರತೀಯ ಸೇನೆಯು ಸ್ಥಳೀಯವಾಗಿ ಶಸ್ತ್ರಾಸ್ತ್ರಗಳ ತಯಾರಿಗೆ ಒತ್ತು ನೀಡುತ್ತಿದೆ. ಧನುಷ್, ಶರಾಂಗ್, ಅಲ್ಪಾ ಲೈಟ್ ಹಾಯಿಟ್ಟರ್, ಕೆ-9 ವಜ್ರದಂತಹ ಗನ್‌ಗಳನ್ನು ಅಭಿವೃದ್ಧಿಪಡಿಸಿದೆ. * ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿರಾಟ್ ನೌಕೆ ಹಾಗೂ ತೇಜಸ್ ಲಘು ಯುದ್ಧ ವಿಮಾನ ಸೇರಿ ಸ್ವದೇಶಿ ಯುದ್ಧೋಪಕರಣಗಳನ್ನು ಭಾರತ ಹೊಂದಿದೆ. ಅಲ್ಲದೆ, ಸೇನೆಯನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಯುದ್ಧ ಉಪಕರಣಗಳ ತಯಾರಿ ಮತ್ತು ಆಮದಿಗಾಗಿ ಹಲವು ರಾಷ್ಟ್ರಗಳೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ.* ಭಾರತವು 14 ಲಕ್ಷಕ್ಕಿಂತ ಅಧಿಕ ಸೇನಾ ಸಿಬ್ಬಂದಿಯನ್ನು ಹೊಂದಿದ್ದು, ಇದು ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಪಡೆ ಮತ್ತು ವಿಶ್ವದ ಅತಿದೊಡ್ಡ ಸ್ವಯಂ ಸೇನೆಯನ್ನು ಹೊಂದಿರುವ ದೇಶವಾಗಿದೆ. 2015ರ ಕ್ರೆಡಿಸ್ ನ್ಯೂಸ್ ವರದಿಯ ಪ್ರಕಾರ, ವಿಶ್ವದ ಮೂರನೇ ಅತಿದೊಡ್ಡ ರಕ್ಷಣಾ ಬಜೆಟ್ ಭಾರತದ್ದಾಗಿದೆ.* 2024ನೇ ಸಾಲಿನ ಪ್ರಬಲ ಸೇನಾಪಡೆಗಳ ರ‍್ಯಾಂಕಿಂಗ್ ಪಟ್ಟಿ :1ನೇ ಸ್ಥಾನ : ಅಮೇರಿಕ 2ನೇ ಸ್ಥಾನ : ರಷ್ಯಾ3ನೇ ಸ್ಥಾನ : ಚೀನಾ 4ನೇ ಸ್ಥಾನ : ಭಾರತ 5ನೇ ಸ್ಥಾನ : ದಕ್ಷಿಣ ಕೊರಿಯಾ6ನೇ ಸ್ಥಾನ : ಬ್ರಿಟನ್ 7ನೇ ಸ್ಥಾನ : ಜಪಾನ್ 8ನೇ ಸ್ಥಾನ : ಟರ್ಕಿ 9ನೇ ಸ್ಥಾನ : ಪಾಕಿಸ್ತಾನ 10ನೇ ಸ್ಥಾನ : ಇಟಲಿ * ಜಗತ್ತಿನ ಟಾಪ್ 10 ದುರ್ಬಲ ಸೇನೆಗಳು ಭೂತಾನ್ ,ಮೊಲ್ಡೊವಾ ,ಸುರಿನಾಮ್, ಸೊಮಾಲಿಯಾ ,ಬೆನಿನ್,ಲೈಬೀರಿಯಾ,ಬೆಲೀಜ್ ,ಸಿಯೆರಾ ಲಿಯೋನ್ ,ಮಧ್ಯ ಆಫ್ರಿಕಾ ಗಣರಾಜ್ಯ ,ಐಸ್‌ಲ್ಯಾಂಡ್.