Job Description: * ಖಗೋಳದಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತದೆ, ಅವುಗಳಲ್ಲಿ ಕೆಲವೊಂದು ಘಟನೆಗಳು ತುಂಬಾನೇ ವಿಸ್ಮಯ, ಕೆಲವೊಮ್ಮೆ ಆ ಘಟನೆಗಳು ಬರೀ ಕಣ್ಣಿಗೆ ಗೋಚರಿಸುವುದು ಅಂಥ ಘಟನೆ ಆಕಾಶದಲ್ಲಿ ಗೋಚರಿಸಿತು.* ಧೂಮಕೇತುಗಳು ಅಥವಾ ಬಾಲಚುಕ್ಕಿಗಳು ಸೌರವ್ಯೂಹದ ವಿಶಿಷ್ಟ ಸದಸ್ಯ ಕಾಯಗಳು ವಿಶೇಷವಾಗಿ ಮಂಜು, ಮಿಥೇನ್, ಕಾರ್ಬನ್ ಡೈ ಆಕ್ಸೈಡ್, ದೂಳು ಹೊತ್ತು ಅವು 'ಕೊಳಕು ಹಿಮಬಂಡೆಗಳು'. * 'ಗ್ರೀನ್ ಕಾಮೆಟ್' ಎಂಬ ಧೂಮಕೇತು ಇದು ಭೂಮಿಯ ಅತಿಥಿ ಎಂದು ಹೇಳಬಹುದಾಗಿದೆ. ಸ್ಯಾಂಡಿಯಾಗೋದ ಒರೆಗಾನ್ ಖಗೋಳ ವೀಕ್ಷಣಾಲಯದಲ್ಲಿ 'ಜೇಮ್ಸ್ ವೆಬ್ ಟೆಲಿಸ್ಕೊಪ್' ಎಂಬ ಅತ್ಯಾಧುನಿಕ ದೂರದರ್ಶಕ ಬಳಸಿ ವಿಜ್ಞಾನಿಗಳು 2022 ರ ಮಾರ್ಚ್ 2 ರಂದು ಈ ಧೂಮಕೇತುವನ್ನು ಪತ್ತೆಹಚ್ಚಿದರು. * ಒಂದೂವರೆ ಕಿಲೋಮೀಟರ್ ಅಡ್ಡಗಲದ ತಲೆಯುಳ್ಳ ಈ ಧೂಮಕೇತುವಿನ ಬಾಲವು ಲಕ್ಷಾಂತರ ಕಿಲೋಮೀಟರ್ ತನಕ ಬೆಳೆಯಬಹುದು. ಪ್ರತಿ 50000 ವರ್ಷಗಳಿಗೊಮ್ಮೆ ಧೂಮಕೇತುವು ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುತ್ತದೆ. * 'ಗ್ರೀನ್ ಕಾಮೆಟ್' ಜನವರಿ ಕೊನೆಯ ವಾರದಿಂದಲೇ ಗೋಚರಿಸಲು ಆರಂಭಿಸಿದೆ. ಮುಸ್ಸಂಜೆಯ ನಂತರ ಮರುದಿನದ ಮುಂಬೆಳಗಿನ ತನಕ ವೀಕ್ಷಿಸಲು ಸರಿಯಾದ ಸಮಯವಾಗಿದೆ.