* 2023 ನೇ ಸಾಲಿನ ರಾಷ್ಟ್ರೀಯ ಕಾಳಿದಾಸ ಸಮ್ಮಾನ್ ಪ್ರಶಸ್ತಿಗೆ ಗಂಜೀಫಾ ರಘುಪತಿ ಭಟ್ಟ ಅವರು ಆಯ್ಕೆಯಾಗಿದ್ದಾರೆ. ಪ್ರತಿ ವರ್ಷ ಜೀವಿತಾವಧಿಯ ಶ್ರೇಷ್ಠತೆ ಆಧಾರದ ಮೇಲೆ ಮಧ್ಯಪ್ರದೇಶ ಸರ್ಕಾರ ಕಾಳಿದಾಸ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.* ಈ ಪ್ರಶಸ್ತಿ ಗೌರವದ ಅಡಿಯಲ್ಲಿ 5 ಲಕ್ಷ ನಗದು ಶಾಲು ಶ್ರೀಫಲಕ ನೀಡಲಾಗುತ್ತದೆ. ಡಿಸೆಂಬರ್ 12 ರಂದು ಉಜ್ಜಯಿನಿಯಲ್ಲಿ ನಡೆಯುವ ಸಮಾರಂಭದಲ್ಲಿ ರಘುಪತಿ ಭಟ್ಟರಿಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. * ಭಟ್ಟರು ಭಾರತೀಯ ಶಾಸ್ತ್ರೀಯ ಚಿತ್ರ ಗಂಜಿಫಾ ರಚನೆಯಲ್ಲಿ ಸುಮಾರು 50 ವರ್ಷ ಸೇವೆ ಸಲ್ಲಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿದ ಮಧ್ಯಪ್ರದೇಶದ ಸರ್ಕಾರ ಕಾಳಿದಾಸ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.