* ಕರ್ನಾಟಕದ 2023- 24ನೇ ಸಾಲಿನ ಜಿಡಿಪಿ ಬೆಳವಣಿಗೆ ಶೇ 10.2ರಷ್ಟಿದ್ದು, ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ (ಎನ್‌ಎಸ್‌ಸಿ) ಸಚಿವಾಲಯ ಅಂದಾಜಿಸಿದ್ದಕ್ಕಿಂತ ಶೇ 6.2 ಹೆಚ್ಚು ಪ್ರಗತಿ ಸಾಧಿಸಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ.* ಏನ್ ಎಸ್ ಸಿ ಅಂಕಿಅಂಶಗಳ ಪ್ರಕಾರ ದೇಶದ ಸರಾಸರಿ ಜಿಡಿಪಿ ಶೇ 82 ಆಗಿದ್ದು, ಜಿಡಿಪಿಯಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಕಳೆದ ವರ್ಷ ರಾಜ್ಯ ಬರಗಾಲಕ್ಕೆ ತುತ್ತಾಗಿದ್ದರೂ, ಜಾಗತಿಕವಾಗಿ ಮಾಹಿತಿ ತಂತ್ರಜ್ಞಾನ ಮಾರುಕಟ್ಟೆ ಹಿನ್ನಡೆ ಅನುಭವಿಸಿದ್ದರೂ, ಕರ್ನಾಟಕ ಉತ್ತಮ ಆರ್ಥಿಕ ಪ್ರಗತಿ ನುರಿಸಿದೆ ಎಂದು ಅಂಕಿ ಅಂಶಗಳ ಪ್ರಕಾರ ತಿಳಿಸ್ ಬಂದಿದೆ.* ಭಾರತದ ಐ.ಟಿ ವಲಯ 2022ರ ಹಣಕಾಸು ಸಾಲಿನಲ್ಲಿ ಶೇ 15.5ರಷ್ಟು ಪ್ರಗತಿ ಕಂಡಿದ್ದು, 2023ರ ಅವಧಿಯಲ್ಲಿ ಶೇ 8ಕ್ಕೆ ಕುಸಿತ ಅನುಭವಿಸಿದರೂ, ಉತ್ತಮ ಆಡಳಿತ ಮತ್ತು ಬಹುವಲಯ ಗಳ ಅಭಿವೃದ್ಧಿಯಿಂದಾಗಿ ಕರ್ನಾಟಕ ರಾಜ್ಯದ ಆರ್ಥಿಕತೆ ಸ್ಥಿರತೆ ಸಾಧಿಸಿದೆ.* 2024-25 ಸಾಲಿಗೆ ಎನ್‌ಎಸ್‌ಸಿ ಹಣಕಾಸು ಕರ್ನಾಟಕ ರಾಜ್ಯಕ್ಕೆ ಶೇ 9.4 ಜಿಡಿಪಿ ಪ್ರಗತಿಯನ್ನು ಅಂದಾಜಿಸಿದ್ದು, ಇದು ರಾಷ್ಟ್ರೀಯ ಹರಾಸರಿ ಶೇ. 10.5ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ, ಹಣಕಾಸು ಸಚಿವಾಲಯ ಕರ್ನಾಟಕದ ಜಿಡಿಪಿ ನೆರವನ್ನು ಶೇ 14ರಷ್ಟು ಅಂದಾಜಿಸಿದೆ.