* ಇಸ್ರೋ ಅಧ್ಯಕ್ಷ ಸೋಮನಾಥ್ ರವರು ಅಕ್ಟೋಬರ್‌ನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷೆಯ “ಗಗನಯಾನ' ಯೋಜನೆಯ ಭಾಗವಾಗಿ ಮೊದಲ ಪರೀಕ್ಷಾರ್ಥ ಸಿಬ್ಬಂದಿ ವಾಹನವನ್ನು (ಕ್ಯೂ ಮಾಡ್ಯೂಲ್) ಉಡ್ಡಯನ ಮಾಡಲಾಗುವುದು ಎಂದು ತಿಳಿಸಿದ್ದಾರೆ. * ಪ್ರಯೋಗಕ್ಕೆ 'ಟಿವಿ-ಡಿ1' ಎಂದು ಹೆಸರಿಸಲಾಗಿದೆ. ಇದರ ಮೂಲಕ 'ಕ್ಯೂ ಮಾಡ್ಯೂಲ್'ನ ಸಾಮರ್ಥ್ಯವನ್ನು ಪರೀಕ್ಷಿಸಲಾಗುವುದು. ಮುಂದಿನ ತಿಂಗಳುಗಳಲ್ಲಿ ಇದೇ ಪರೀಕ್ಷೆಯನ್ನು ಪುನರಾವರ್ತಿಸಲಾಗುವುದು. * 2024 ರ ಮೊದಲಾರ್ಧದಲ್ಲಿ ಚೊಚ್ಚಲ ಮಾನವ ರಹಿತ ಗಗನಯಾನ ಉಡ್ಡಯನ ಮಾಡಲಾಗುವುದು. ಇದರಲ್ಲಿ 'ವೋಮಮಿತ್ರ' ಎಂಬ ರೊಬೊ ಕಳುಹಿಸಲಾಗುವುದು'' ಎಂದು ಅವರು ಮಾಹಿತಿ ನೀಡಿದ್ದಾರೆ.