* ಕರ್ನಾಟಕ ರಾಜ್ಯವು 2023 ರ “ಆಯುಷ್ಮಾನ್ ಉತ್ಕೃಷ್ಟತಾ ಪ್ರಶಸ್ತಿ'ಯನ್ನು ಮುಡಿಗೇರಿಸಿಕೊಂಡಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ಆರೋಗ್ಯ ಮಂಥನ ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಾ.ರಂದೀಪ್ ಪ್ರಶಸ್ತಿ ಸ್ವೀಕರಿಸಿದರು. * ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ 2022ರ ಅಕ್ಟೋಬರ್‌ನಿಂದ 2023 ರ ಸೆಪ್ಟೆಂಬರ್‌ವರೆಗಿನ ಸೇವಾ ಕ್ಷೇತ್ರದ ಲಿಂಗ ಸಮಾನತೆಯಲ್ಲಿ ಕರ್ನಾಟಕವು ಗುರುತಿಸಲ್ಪಟ್ಟಿದೆ.