* ಭೂತಾನ್‌ನ ಸಂಸತ್ ಚುನಾವಣೆಯಲ್ಲಿ ಜನವರಿ 09 ರಂದು (ಮಂಗಳವಾರ) ನಡೆದ ಭಾರತದ ಪರ ತ್ಶೆರಿಂಗ್ ಟೋಬ್‌ಗೇ ಅವರ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಭರ್ಜರಿ ಜಯ ಸಾಧಿಸಿದೆ.* 47 ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಲ್ಲಿ ಪಿಡಿಪಿ 30 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಮರಳಿದೆ ಮತ್ತು ಭೂತಾನ್ ಟೆಂಡ್ರೆಲ್ ಪಕ್ಷವು 17 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಭೂತಾನ್ ಬ್ರಾಡ್‌ಕಾಸ್ಟಿಂಗ್ ಸರ್ವೀಸ್ ವರದಿ ಮಾಡಿದೆ.* 58 ವರ್ಷದ ಟೊಬ್ಗೇ ಎರಡನೇ ಬಾರಿಗೆ ಭೂತಾನ್ ಪ್ರಧಾನಿಯಾಗಲಿದ್ದಾರೆ. ಪ್ರಸ್ತುತ ರಾಜನ ಆಳ್ವಿಕೆಯ ಪ್ರಾರಂಭದ ನಂತರ 2008 ರಲ್ಲಿ ಸ್ಥಾಪನೆಯಾದಾಗ ಅವರು ಭೂತಾನ್‌ನ ಮೊದಲ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಟೋಬ್ಗೇ ಅವರು 2013 ರಿಂದ 2018 ರವರೆಗೆ ಭೂತಾನ್‌ನ ಪ್ರಧಾನ ಮಂತ್ರಿಯಾಗಿದ್ದರು.