* ನಾಯಿ ಮಾಂಸ (Dog Meat) ಸೇವನೆ ತೆಗೆದುಹಾಕುವ ಮಸೂದೆಯನ್ನು ದಕ್ಷಿಣ ಕೊರಿಯಾ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. * ಪ್ರಾಣಿ ಕಲ್ಯಾಣಕ್ಕಾಗಿ ಹೆಚ್ಚುತ್ತಿರುವ ಬೆಂಬಲದ ನಡುವೆ ವಿವಾದಾತ್ಮಕ ಪ್ರಾಚೀನಲಂಕಾದ ಆಹಾರ ಪ್ರದ್ದತಿಯನ್ನು ನಿಷೇಧಿಸಲಾಗಿದೆ.* ದಕ್ಷಿಣ ಕೊರಿಯಾದ ಸಂಸತ್ತು ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ಈ ಮಸೂದೆಯನ್ನು ಕಾನೂನಾಗಿ ಜಾರಿಗೆ ತರಲು ಪ್ರತಿಜ್ಞೆ ಮಾಡಿದ್ದರು. ಸರ್ವಾನುಮತದ 208 ಮತದ ಮೂಲಕ ನಾಯಿ ಮಾಂಸ ನಿಷೇಧಿಸುವ ಮಸೂದೆ ಅಂಗೀಕಾರಗೊಂಡಿದೆ . * ವರದಿಯ ಪ್ರಕಾರ ದಕ್ಷಿಣ ಕೊರಿಯಾದಲ್ಲಿ ಪ್ರತಿ ವರ್ಷ ಒಂದು ಮಿಲಿಯನ್ ನಾಯಿಗಳ ಮಾಂಸವನ್ನು ತಿನ್ನಲಾಗುತ್ತದೆ.* ಬೀದಿನಾಯಿಗಳು ಮತ್ತು ಬೆಕ್ಕುಗಳನ್ನು ದತ್ತು ತೆಗೆದುಕೊಳ್ಳಲು ಹೆಸರುವಾಸಿಯಾದ ಅಧ್ಯಕ್ಷ ಯೂನ್ ಅವರ ಅಡಿಯಲ್ಲಿ ನಿಷೇಧಕ್ಕೆ ಬೆಂಬಲವು ವ್ಯಕ್ತವಾಗಿದೆ.* ಈ ಕಾನೂನಿನ ಪ್ರಕಾರ 2027ರಿಂದ ನಾಯಿ ಹತ್ಯೆ ಅದರ ಮಾಂಸದ ಸೇವನೆ ಮಾರಾಟ ನಿಷೇಧಗೊಳ್ಳುತ್ತದೆ. ಈ ಕಾನೂನು ಉಲ್ಲಂಘಿಸುವವರಿಗೆ 2-3 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.ನಾಯಿಗಳನ್ನು ಕಡಿಯುವಲ್ಲಿ ತಪ್ಪಿತಸ್ಥರು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.* ಮೂರು ವರ್ಷಗಳ ಗ್ರೇಸ್ ಅವಧಿಯ ನಂತರ 2027 ರಲ್ಲಿ ಕಾನೂನು ಜಾರಿಯಾಗಲಿದೆ. ನಾಯಿ ಮಾಂಸ ಉದ್ಯಮದಲ್ಲಿರುವವರಿಗೆ ವ್ಯಾಪಾರ ಬದಲಾಯಿಸಲು ಸಹಾಯ ಮಾಡಲು ಸಬ್ಸಿಡಿ ನೀಡಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. * ದಕ್ಷಿಣ ಕೊರಿಯಾದ ಸರ್ಕಾರದ ಅಂಕಿಅಂಶಗಳ ಪ್ರಕಾರ ಪ್ರಸ್ತುತ 1,600 ರೆಸ್ಟೋರೆಂಟ್‌ಗಳಲ್ಲಿ ನಾಯಿ ಮಾಂಸವನ್ನು ಖಾದ್ಯವಾಗಿ ನೀಡಲಾಗುತ್ತಿದೆ. ಕೆಲವು 1,150 ನಾಯಿ ಸಾಕಣೆ ಕೇಂದ್ರಗಳು ದೇಶದಲ್ಲಿ ಉದ್ಯಮ ನಡೆಸುತ್ತಿವೆ.