* ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲ್ ಲೋಕದಲ್ಲಿ ನಿರ್ಮಿಸಲಾದ ದೇಶದ ಮೊದಲ ಆರೋಗ್ಯಕರ ಮತ್ತು ಸ್ವಚ್ಛ ಬೀದಿ ಆಹಾರ ಕೇಂದ್ರ 'ಹೈಜಿನಿಕ್ ಫುಡ್ ಸ್ಟ್ರೀಟ್', ‘ಪ್ರಸಾದಂ’ ಮತ್ತು ‘ಅವಂತಿಕಾ ಹಾತ್ ಬಜಾರ್’ ಅನ್ನು ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು ಜನವರಿ 07 ರಂದು ಉದ್ಘಾಟಿಸಿದರು.* ಈ ಉಪಕ್ರಮವು ದೇಶಾದ್ಯಂತ ಇರುವ ದೇವಸ್ಥಾನಗಳಲ್ಲಿ ಭಕ್ತರಿಗೆ ಶುದ್ಧ ಪ್ರಸಾದ ಒದಗಿಸುವ ಗುರಿ ಹೊಂದಿದೆ.* ಹೊಸದಾಗಿ ಪ್ರಾರಂಭಿಸಲಾದ ಫುಡ್ ಸ್ಟ್ರೀಟ್ ಅನ್ನು ಮಕ್ಕಳ ಆಟದ ಪ್ರದೇಶ, ಕುಡಿಯುವ ನೀರಿನ ಸೌಲಭ್ಯಗಳು, ಸಿಸಿಟಿವಿ ಕಣ್ಗಾವಲು, ಪಾರ್ಕಿಂಗ್, ಸಾರ್ವಜನಿಕ ಅನುಕೂಲಗಳು ಮತ್ತು ಹೇರಳವಾದ ಆಸನ ಸಾಮರ್ಥ್ಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.* ಮಾಂಡವಿಯಾ ಮತ್ತು ಯಾದವ್ ಜಂಟಿಯಾಗಿ ಎರಡು ಸಾರ್ವಜನಿಕ ಆರೋಗ್ಯ ಘಟಕ ಬ್ಲಾಕ್‌ಗಳು, 54 ಮುಖ್ಯಮಂತ್ರಿ ಸಂಜೀವನಿ ಆರೋಗ್ಯ ಚಿಕಿತ್ಸಾಲಯಗಳು ಮತ್ತು ಮೂರು ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಸೇರಿದಂತೆ ಒಟ್ಟು 17 ನಾಗರಿಕ ಯೋಜನೆಗಳನ್ನು ಉದ್ಘಾಟಿಸಿದರು. * ಮೂರು ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಎಂಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 30 ಹಾಸಿಗೆಗಳು ಮತ್ತು ವಾರ್ಡ್‌ಗಳನ್ನು ಒಳಗೊಂಡಿರುವ ತುರ್ತು ಕೋವಿಡ್ ಪ್ರತಿಕ್ರಿಯೆ ಘಟಕವನ್ನು ಮಾಂಡವಿಯಾ ಮತ್ತು ಯಾದವ್ ಅವರು ಅನಾವರಣಗೊಳಿಸಿದರು.* ಕಾರ್ಯಕ್ರಮದ ಪ್ರಕಾರ ಸಿಎಂ ಯಾದವ್ ಮತ್ತು ಕೇಂದ್ರ ಸಚಿವ ಮಾಂಡವೀಯ ಅವರು ಇತರ ಜನಪ್ರತಿನಿಧಿಗಳೊಂದಿಗೆ 218.76 ಕೋಟಿ ರೂ.ಗಳ 187 ಕಾಮಗಾರಿಗಳ ಭೂಮಿಪೂಜೆ ಮತ್ತು ಉದ್ಘಾಟನೆ ನೆರವೇರಿಸಿದರು. 118.07 ಕೋಟಿ ಮೌಲ್ಯದ ರಾಜ್ಯದ 36 ಆರೋಗ್ಯ ಸಂಸ್ಥೆಗಳ ಭೂಮಿಪೂಜೆ 98.94 ಕೋಟಿ ಮೌಲ್ಯದ ರಾಜ್ಯದ 150 ಆರೋಗ್ಯ ಸಂಸ್ಥೆಗಳ ಉದ್ಘಾಟನೆ ಮತ್ತು 1.75 ಕೋಟಿ ವೆಚ್ಚದ ಉಜ್ಜಯಿನಿ ಫುಡ್ ಸ್ಟ್ರೀಟ್ ಪ್ರಸಾದ ಉದ್ಘಾಟಿಸಲಾಗಿದೆ.