Job Description: * ಏಪ್ರಿಲ್ 20 ರಂದು ಉದ್ಯಮಿ ಎಲಾನ್ ಮಸ್ಕ್ ಒಡೆತನದ ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್ ಎಕ್ಸ್ ನಿರ್ಮಿಸಿದ ಜಗತ್ತಿನ ಅತಿದೊಡ್ಡ ಸ್ಟಾರ್‌ಬೆಸ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 8.33 ಕ್ಕೆ ರಾಕೆಟ್‌ ಅನ್ನು ಉಡಾವಣೆ ಮಾಡಲಾಗಿದ್ದು, ರಾಕೆಟ್ ಪ್ರಾಯೋಗಿಕ ಉಡಾವಣೆಯಲ್ಲೇ ಸ್ಫೋಟಗೊಂಡಿದೆ.* ಗಗನಯಾತ್ರಿಗಳನ್ನು ಚಂದ್ರ, ಮಂಗಳ ಹಾಗೂ ಅದರಾಚೆಗಿನ ಗ್ರಹಗಳಿಗೆ ಕಳುಹಿಸುವ ಉದ್ದೇಶದಿಂದ ಸ್ಟಾರ್‌ಶಿಪ್‌ ರಾಕೆಟ್‌ಅನ್ನು ಅಭಿವೃದ್ಧಿಪಡಿಸಲಾಗಿತ್ತು.* ಉಡಾವಣೆಯಾದ ಮೂರು ನಿಮಿಷದಲ್ಲಿ ಮೊದಲ ಹಂತದಿಂದ ಸ್ಟಾರ್‌ಶಿಪ್‌ ಕ್ಯಾಪ್ಸುಲ್‌ ಬೇರ್ಪಡಬೇಕಿತ್ತು. ಬೇರ್ಪಡಲು ವಿಫಲವಾದ್ದರಿಂದ ರಾಕೆಟ್‌ ಮಧ್ಯದಲ್ಲಿಯೇ ಸ್ಟೋಟಗೊಂಡಿದೆ.