* ಲಿಬರೇಷನ್ ಆಫ್ ಟೈಗರ್ಸ್ ಆಫ್ ತಮಿಳ್ ಈಳಂ(ಎಲ್‌ಟಿಟಿಇ) ಸಂಘಟನೆಯ ಮೇಲಿನ ನಿಷೇಧವನ್ನು ಕೇಂದ್ರ ಗೃಹ ಸಚಿವಾಲಯ ಮೇ 14 ರಂದು (ಮಂಗಳವಾರ) ಮತ್ತೆ ಮುಂದಿನ ಐದು ವರ್ಷಗಳಿಗೆ ವಿಸ್ತರಿಸಿದೆ ಎಂದು ಆದೇಶ ಹೊರಡಿಸಿದೆ.* 1976ರಲ್ಲಿ ಶ್ರೀಲಂಕಾದಲ್ಲಿ ವೇಲುಪಿ ಪ್ರಭಾಕರನ್ ಎಲ್ ಟಿಟಿಇಯನ್ನು ಸ್ಥಾಪಿಸಿದ್ದು, 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾದ ನಂತರ ಭಾರತ ಎಲ್ ಟಿಟಿಇ ಮೇಲೆ ನಿಷೇಧ ಹೇರಿತ್ತು. ಆ ಬಳಿಕ ಪ್ರತಿ ಐದು ವರ್ಷಗಳಿಗೊಮ್ಮೆ ಸಂಘಟನೆ ಮೇಲಿನ ನಿಷೇಧವನ್ನು ವಿಸ್ತರಿಸಲಾಗುತ್ತಿದೆ.* ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಸೆಕ್ಷನ್ 3 ರ ಉಪ-ವಿಭಾಗಗಳು (1 ಮತ್ತು (3) ಅನ್ನು ಅನ್ವಯಿಸಿ ಕೇಂದ್ರ ಗೃಹ ಸಚಿವಾಲಯವು ನಿಷೇಧಿತ ಲಿಬರೇಷನ್ ಆಫ್ ಟೈಗರ್ಸ್ ಆಫ್ ತಮಿಳ್ ಈಳಂ(ಎಲ್‌ಟಿಟಿಇ) ಯನ್ನು ಕಾನೂನು ಬಾಹಿರ ಸಂಘಟನೆ ಎಂದು ನಿಷೇಧಿಸಿದೆ.