* ಏಷ್ಯನ್ ಕ್ರೀಡಾಕೂಟದ ಬಿಲ್ಗಾರಿಕೆ (ಆರ್ಚರಿ) ಸ್ಪರ್ಧೆಯ ರಿಕರ್ವ್ ವಿಭಾಗದಲ್ಲಿ ಅಕ್ಟೋಬರ್ 6 ರಂದು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದುಕೊಂಡಿವೆ. 2010ರ (ಗುವಾಂಗ್‌ಝ್) ಕ್ರೀಡೆಗಳ ನಂತರ ಇದೇ ಮೊದಲ ಬಾರಿ ಭಾರತ ಈ ಸ್ಪರ್ಧೆಯಲ್ಲಿ ಪದಕ ಗೆದ್ದುಕೊಂಡಿದೆ.* ಐದನೇ ಶ್ರೇಯಾಂಕದ ಮಹಿಳಾ ತಂಡ ಕಂಚಿನ ಪದಕಕ್ಕೆ ನಡೆದ Fa 6-2 80 (56-52, 55-56, 57-50, 51-48) ತಂಡವನ್ನು ಸೋಲಿಸಿದರು.* ಅಂಕಿತಾ ಭಕ್ತಿ, ಸಿಮ್ರಣಜೀತ್ ಕೌರ್ ಮತ್ತು ಭಜನ್ ಕೌರ್ ಅವರು ತಂಡದಲ್ಲಿದ್ದರು. 18 ವರ್ಷದ ಭಜನ್ ಭುಜದ ನೋವಿನಿಂದ ಬಳಲಿದ್ದರೂ ಸ್ಪರ್ಧಿಸಿದರು. * ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿದ್ದ ಭಾರತ, ಚಿನ್ನದ ಪದಕಕ್ಕೆ ನಡೆದ ಪೈಪೋಟಿಯಲ್ಲಿ ಪ್ರಬಲ ದಕ್ಷಿಣ ಕೊರಿಯಾ ಎದುರು ಹೆಚ್ಚೇನೂ ಮಾಡಲಾಗಲಿಲ್ಲ. ಲೀ ವೂಸಿಯೊಕ್, ಒಹ್ ಜಿನ್‌ಹೈಕ್ ತ್ತು ಕಿಮ್ ಜೆ ಡಿಯೊಕ್ ಅವರನ್ನೊಳಗೊಂಡ ಕೊರಿಯಾ ತಂಡ 5-1 ರಿಂದ (60-55, 57-57, 56-55) ರಲ್ಲಿ ಜಯ ಗಳಿಸಿ ಚಿನ್ನ ಪಡೆದುಕೊಂಡಿತು.* ಪುರುಷರ ರೀಕರ್ವ್ ವಿಭಾಗದಲ್ಲಿ ಭಾರತ 2010ರಲ್ಲಿ ಕೊನೆಯ ಬಾರಿ ಪದಕ (ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ, ಪುರುಷ, ಮಹಿಳಾ ತಂಡ ವಿಭಾಗದಲ್ಲಿ ಕಂಚು) ಗೆದ್ದುಕೊಂಡಿತ್ತು. 13 ವರ್ಷಗಳ ಬಿಲ್ಲಾರರ ಗುರಿಗೆ ಪದಕ ಒಲಿದಿದೆ.