Job Description: * ಯಲಹಂಕ ವಾಯುನೆಲೆಯ ಒಟ್ಟು 35 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ನಡೆಯಲಿರುವ ಏರೋ ಇಂಡಿಯಾ- 2023" ಅನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಫೆ.13 ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟಿಸಿದ್ದಾರೆ.* ಪ್ರಮುಖ ಅಂಶಗಳು: - ಫೆ.13ರಿಂದ 15ರವರೆಗೆ ವ್ಯಾಪಾರ ವಹಿವಾಟು ದಿನಗಳು - 16 ಮತ್ತು 17ರಂದು ಸಾರ್ವಜನಿಕರಿಗೆ ಅವಕಾಶ- 32 ದೇಶಗಳ ರಕ್ಷಣಾ ಸಚಿವರು ಭಾಗವಹಿಸಲಿದ್ದಾರೆ.- 29 ದೇಶಗಳ ವಾಯುಪಡ ಮುಖ್ಯಸ್ಥರು, 73 ಸಿಇಒಗಳು- ಭಾರತದ 701 ಮತ್ತು ವಿದೇಶದ 110 ಪ್ರದರ್ಶಕರು ಭಾಗಿ - ರಕ್ಷಣಾ ಕ್ಷೇತ್ರದ ರಕ್ಷಣಾ ಕಂಪನಿ ಗಳು, ಎಂಎಸ್‌ಎಂಇಗಳು, ನವೋದ್ಯಮಗಳಿಂದ ತಂತ್ರಜ್ಞಾನ ಪ್ರದರ್ಶನ- ಕರ್ನಾಟಕದ ಪ್ರತ್ಯೇಕ ಪೆವಿಲಿಯನ್. ರಾಜ್ಯದಲ್ಲಿ ವಿಪುಲ ಅವಕಾಶಗಳ ಅನಾವರಣ* ವೈಮಾನಿಕ ಕ್ಷೇತ್ರದ ಶಕ್ತಿ ಪ್ರದರ್ಶನವು ದೈವಾರ್ಷಿಕವಾಗಿ ನಡೆಯುತ್ತಿದ್ದು, ಇದು 14ನೇ ಆವೃತ್ತಿ, ಏಷ್ಯಾದಲ್ಲೇ ಅತಿ ದೊಡ್ಡ ರಕ್ಷಣಾ ಮತ್ತು ವೈಮಾನಿಕ ಪ್ರದರ್ಶನವಾಗಿದೆ. ದೇಶದ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು, ರಕ್ಷಣಾ ಉಪಕರಣಗಳು ಮತ್ತು ವೈಮಾನಿಕ ಕ್ಷೇತ್ರದ ಸಾಧನೆ ಗಳನ್ನು ಬಿಂಬಿಸಲಿದೆ.