Job Description: * ಪ್ರತಿ ವರ್ಷ ಏಪ್ರಿಲ್ 4 ರಂದು ಸ್ಫೋಟಕ ಗಣಿಗಳ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಗಣಿ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. 2023ರ ಅಂತರಾಷ್ಟ್ರೀಯ ಗಣಿ ಜಾಗೃತಿ ದಿನದ ಥೀಮ್ "ಮೈನ್ ಆಕ್ಷನ್ ಕಾಯುವುದಿಲ್ಲ" ಎಂಬ ಥೀಮ್ ನೊಂದಿಗೆ ಈ ದಿನಾಚರಣೆಯನ್ನು ಆಚರಿಸಲಾಯಿತು.* ಕಾಂಬೋಡಿಯಾ, ಲಾವೋಸ್ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿ ಸ್ಫೋಟಕ ಗಣಿಗಳಿಂದ ಉಂಟಾದ ದೀರ್ಘಕಾಲದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಈ ವರ್ಷದ ಅಭಿಯಾನಕ್ಕಾಗಿ ಯುನೈಟೆಡ್ ನೇಷನ್ಸ್ ಮೈನ್ ಆಕ್ಷನ್ ಸರ್ವಿಸ್ (UNMAS) ಹಲವಾರು ದಶಕಗಳಿಂದ ಉಳಿದುಕೊಂಡಿರುವ ಈ ಸಮಸ್ಯೆಗಳನ್ನು ಪರಿಹರಿಸುವ ತುರ್ತನ್ನು ಒತ್ತಿಹೇಳುವುದು ಅಭಿಯಾನದ ಗುರಿಯಾಗಿದೆ.