Job Description: * 'ರೋಗನಿರೋಧಕ ಶಕ್ತಿ ದುರ್ಬಲವಾಗಿರುವ ಚಿಕ್ಕಮಕ್ಕಳು ಮತ್ತು ವೃದ್ಧರಲ್ಲಿ ಎಚ್‌ಎನ್2 ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇನ್‌ಪ್ಪುಯೆಂಜಾ ಸಂಬಂಧಿತ ಈ ವೈರಸ್‌ನಿಂದಾಗಿ ತೀವ್ರವಾದ ಉಸಿರಾಟದ ಸೋಂಕು ಉಂಟಾಗುತ್ತದೆ. ಈ ರೀತಿಯ ಪ್ರಕರಣಗಳು ಕೆಲ ತಿಂಗಳುಗಳಿಂದ ವಿಶ್ವದೆಲ್ಲೆಡೆಯಿಂದ ವರದಿಯಾಗುತ್ತಿವೆ. * ಸಾಮಾನ್ಯವಾಗಿ ಭಾರತದಲ್ಲಿ ವರ್ಷಕ್ಕೆರಡು ಬಾರಿ ಇನ್‌ಫ್ಲ್ಯುಯೆಂಜಾ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಒಂದು ಜನವರಿಯಿಂದ ಮಾರ್ಚ್ ವರೆಗೆ ಮತ್ತೊಂದು ಮಳೆಗಾಲದಲ್ಲಿ ಇಂಥ ಪ್ರಕರಣಗಳು ಕಂಡುಬರುತ್ತವೆ.* ಆರೋಗ್ಯದ ಸಮಗ್ರ ಮಾಹಿತಿ ವೇದಿಕೆಯ (ಐಡಿಎಸ್‌ಪಿ- ಐಎಚ್‌ಐಪಿ)ಯಾ ವರದೀಯ ಪ್ರಕಾರ ಎಚ್‌3ಎನ್‌2 ಸೇರಿದಂತೆ ಇನ್‌ಫ್ರುಯೆಂಜಾ ವೈರಸ್‌ಗೆ ಸಂಬಂಧಿಸಿದಂತೆ ಮಾರ್ಚ್ 9ರವರೆಗೆ ದೇಶದಲ್ಲಿ ಒಟ್ಟು 3,038 ಪ್ರಕರಣಗಳು ಹಾಗೂ ಜನವರಿಯಲ್ಲಿ 1,245, ಫೆಬ್ರವರಿಯಲ್ಲಿ 1,307 ಹಾಗೂ ಮಾರ್ಚ್‌ನಲ್ಲಿ 486 ಪ್ರಕರಣಗಳು ವರದಿಯಾಗಿವೆ' ಎಂದು ಆರೋಗ್ಯದ ಎಂದು ತಿಳಿದು ಬಂದಿದೆ.