Job Description: * ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ 12 ಚೀತಾಗಳನ್ನು ಸ್ಥಳಾಂತರಿಸಲು ಭಾರತವು ದಕ್ಷಿಣ ಆಫ್ರಿಕಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕೇಂದ್ರ ಪರಿಸರ ಸಚಿವಾಲಯದಿಂದ ತಿಳಿದು ಬಂದಿದೆ. ಕಳೆದ ವಾರ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಫೆಬ್ರವರಿ 15 ರೊಳಗೆ ಏಳು ಗಂಡು ಮತ್ತು ಐದು ಹೆಣ್ಣು ಚೀತಾಗಳು ಕುನೊಗೆ ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.* 12 ದಕ್ಷಿಣ ಆಫ್ರಿಕಾದ ಚೀತಾಗಳು ಆರು ತಿಂಗಳಿಗೂ ಹೆಚ್ಚು ಕಾಲ ಕ್ವಾರಂಟೈನ್‌ನಲ್ಲಿ ಇದೆ ಮತ್ತು ಈ ತಿಂಗಳು ಕುನೊ ತಲುಪುವ ನಿರೀಕ್ಷೆಯಿದೆ.1947 ರಲ್ಲಿ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ಕೊನೆಯ ಚೀತಾ ಸಾವನ್ನಪ್ಪಿತು ಮತ್ತು 1952 ರಲ್ಲಿ ಈ ಪ್ರಭೇದವು ಅಳಿವಿನಂಚಿನಲ್ಲಿದೆ ಎಂದು ಘೋಷಿಸಲಾಯಿತು.