* ಅಗ್ರ ಶ್ರೇಯಾಂಕದ ಆಟಗಾರ್ತಿ ಐಎಂ ದಿವ್ಯಾ ದೇಶಮುಖ್‌ ಅವರು ಜೂನ್ 13 ರಂದು (ಗುರುವಾರ) ಮುಕ್ತಾಯಗೊಂಡ ಫಿಡೆ ವಿಶ್ವ ಜೂನಿಯರ್ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. * ಅಂತಿಮವಾಗಿ (11ನೇ) ಸುತ್ತಿನಲ್ಲಿ ಮಹಾರಾಷ್ಟ್ರದ ಆಟಗಾರ್ತಿ ಬಲ್ಗೇರಿಯಾದ ಕ್ರಾತ್ಸೇವಾ ಬೆಲೊಸ್ಲಾವಾ ಅವರನ್ನು ಸೋಲಿಸಿ ಒಟ್ಟು 10 ಪಾಯಿಂಟ್ಸ್ ಸಂಗ್ರಹಿಸಿದರು. * ಅರ್ಮೇನಿಯಾದ ಎಂ. ಮರಿಯಮ್ ಅವರು (9.5) ಅಂಕಗಳೊಂದಿಗೆ ಎರಡನೇ ಸ್ಥಾನ ಹಾಗೂ ಅಜರ್‌ಬೈಜಾನ್‌ನ ಅಯಾನ್ ಅಲ್ಲಾವರ್ದಿಯೆವಾ ಅವರು 8.5 ಅಂಕಗಳೊಂದಿಗೆ ರಷ್ಯಾದ ನಾರ್ಮನ್ ಕ್ಸೆನಿಯಾ ಅವರನ್ನು ಸೋಲಿಸಿ ಮೂರನೇ ಸ್ಥಾನ ಪಡೆದರು.* ಓಪನ್ ವಿಭಾಗದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ನೀಡಿದ ಗ್ರ್ಯಾಂಡ್‌ಮಾಸ್ಟರ್ ಪ್ರಣವ್ ಆನಂದ್ ಅವರು ಅರ್ಮೇನಿಯಾದ ಆರ್ಸೆನ್ ದಾವ್ಟಿಯಾನ್ ವಿರುದ್ಧ ಗೆದ್ದಾಗ 7.5 ಅಂಕಗಳೊಂದಿಗೆ 10 ನೇ ಸ್ಥಾನ ಪಡೆದರು.