* ಭಾರತವು ತನ್ನ ಸೆಮಿಕಂಡಕ್ಟರ್ ಯಾನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, DHRUV64 ಎಂಬ ಮೊದಲ ಸ್ವದೇಶಿ 1.0 GHz, 64-ಬಿಟ್ ಡ್ಯುಯಲ್-ಕೋರ್ ಮೈಕ್ರೋಪ್ರೊಸೆಸರ್ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಈ ಪ್ರೊಸೆಸರ್ ಅನ್ನು ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರ (C-DAC), ಮೈಕ್ರೋಪ್ರೊಸೆಸರ್ ಡೆವಲಪ್‌ಮೆಂಟ್ ಪ್ರೋಗ್ರಾಂ (MDP) ಅಡಿಯಲ್ಲಿ ರೂಪಿಸಿದೆ.* DHRUV64 ಭಾರತಕ್ಕೆ ವಿಶ್ವಾಸಾರ್ಹ ಹಾಗೂ ಸ್ವಾವಲಂಬಿ ಪ್ರೊಸೆಸರ್ ತಂತ್ರಜ್ಞಾನವನ್ನು ಒದಗಿಸುತ್ತದೆ. ಇದು ಡಿಜಿಟಲ್ ಮೂಲಸೌಕರ್ಯ, ತಂತ್ರಜ್ಞಾನಾತ್ಮಕ (strategic) ಹಾಗೂ ವಾಣಿಜ್ಯ ಬಳಕೆಗಳಿಗೆ ಸೂಕ್ತವಾಗಿದೆ. ವಿದೇಶಿ ಮೈಕ್ರೋಪ್ರೊಸೆಸರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.* ಈ ಪ್ರೊಸೆಸರ್ ಆಧುನಿಕ ವಾಸ್ತುಶಿಲ್ಪವನ್ನು ಹೊಂದಿದ್ದು, ಹೆಚ್ಚಿನ ಕಾರ್ಯಕ್ಷಮತೆ, ಉತ್ತಮ ಮಲ್ಟಿಟಾಸ್ಕಿಂಗ್ ಮತ್ತು ವಿಶ್ವಾಸಾರ್ಹತೆಯನ್ನು ನೀಡುತ್ತದೆ. 5G ಮೂಲಸೌಕರ್ಯ, ವಾಹನ ವ್ಯವಸ್ಥೆಗಳು, ಕೈಗಾರಿಕಾ ಸ್ವಯಂಚಾಲಿತ ವ್ಯವಸ್ಥೆಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು IoT ಕ್ಷೇತ್ರಗಳಲ್ಲಿ ಬಳಸಲು ಇದು ಅನುಕೂಲವಾಗಿದೆ.*ಭಾರತವು ಜಾಗತಿಕವಾಗಿ ಉತ್ಪಾದನೆಯಾಗುವ ಮೈಕ್ರೋಪ್ರೊಸೆಸರ್‌ಗಳಲ್ಲಿನ ಸುಮಾರು 20% ಬಳಕೆದಾರ ರಾಷ್ಟ್ರವಾಗಿದೆ. DHRUV64 ನಂತಹ ಸ್ವದೇಶಿ ಪ್ರೊಸೆಸರ್‌ಗಳು ದೇಶದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಿ, ಭದ್ರತೆ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸುತ್ತವೆ.- ಇದಕ್ಕೂ ಮುನ್ನ ಭಾರತವು: => SHAKTI (IIT ಮದ್ರಾಸ್)=> AJIT (IIT ಬಾಂಬೆ)=> VIKRAM (ISRO–SCL)=> THEJAS64 (C-DAC)ಮಾದರಿಯ ಸ್ವದೇಶಿ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಸರಣಿಯಲ್ಲಿ DHRUV64 ಪ್ರಮುಖ ಮೈಲಿಗಲ್ಲಾಗಿದೆ.* DHRUV64 ಸ್ಟಾರ್ಟ್‌ಅಪ್‌ಗಳು, ಅಕಾಡೆಮಿಯಾ ಮತ್ತು ಕೈಗಾರಿಕೆಗಳಿಗೆ ಕಡಿಮೆ ವೆಚ್ಚದಲ್ಲಿ ಸ್ವದೇಶಿ ಉತ್ಪನ್ನಗಳ ವಿನ್ಯಾಸ, ಪರೀಕ್ಷೆ ಹಾಗೂ ಪ್ರೋಟೋಟೈಪಿಂಗ್ ಮಾಡಲು ಅಗತ್ಯವಾದ ಬಲಿಷ್ಠ ವೇದಿಕೆಯನ್ನು ಒದಗಿಸುತ್ತದೆ. ವಿದೇಶಿ ಪ್ರೊಸೆಸರ್‌ಗಳ ಮೇಲೆ ಅವಲಂಬನೆ ಕಡಿಮೆಯಾಗುವುದರಿಂದ, ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೊಸ ದಿಕ್ಕು ಸಿಗುತ್ತದೆ. ಇದರ ಪರಿಣಾಮವಾಗಿ, ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಶಲ ಸೆಮಿಕಂಡಕ್ಟರ್ ಮತ್ತು ಚಿಪ್ ವಿನ್ಯಾಸ ತಜ್ಞರನ್ನು ರೂಪಿಸಲು ಸಹಕಾರಿಯಾಗುತ್ತದೆ. DHRUV64 ಯಶಸ್ಸಿನೊಂದಿಗೆ ಮುಂದಿನ ತಲೆಮಾರಿನ DHANUSH ಮತ್ತು DHANUSH+ ಪ್ರೊಸೆಸರ್‌ಗಳ ಅಭಿವೃದ್ಧಿ ಪ್ರಕ್ರಿಯೆ ಕೂಡ ವೇಗ ಪಡೆದುಕೊಂಡಿದ್ದು, ಭಾರತದ ಸ್ವದೇಶಿ ಪ್ರೊಸೆಸರ್ ರಸ್ತೆನಕ್ಷೆಯನ್ನು ಇನ್ನಷ್ಟು ಬಲಪಡಿಸಿದೆ.* Digital India RISC-V (DIR-V) ಮತ್ತು RISC-V ಮಹತ್ವ : DHRUV64 ಅನ್ನು RISC-V ಓಪನ್ ಆರ್ಕಿಟೆಕ್ಚರ್ ಆಧರಿಸಿ ಅಭಿವೃದ್ಧಿಪಡಿಸಲಾಗಿದ್ದು, ಇದು ಲೈಸೆನ್ಸ್ ಶುಲ್ಕವಿಲ್ಲದ ಮುಕ್ತ ತಂತ್ರಜ್ಞಾನವಾಗಿರುವುದರಿಂದ ವ್ಯಾಪಕ ಬಳಕೆಗೆ ಅವಕಾಶ ನೀಡುತ್ತದೆ. ಈ ಓಪನ್ ಆರ್ಕಿಟೆಕ್ಚರ್ ಸಂಯುಕ್ತ ನವೀನತೆಗೆ ಉತ್ತೇಜನ ನೀಡುವ ಜೊತೆಗೆ, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಕೈಗಾರಿಕೆಗಳ ನಡುವೆ ಸಹಕಾರವನ್ನು ಹೆಚ್ಚಿಸುತ್ತದೆ. DIR-V ಕಾರ್ಯಕ್ರಮದ ಉದ್ದೇಶ ಭಾರತವನ್ನು ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ESDM) ಕ್ಷೇತ್ರದಲ್ಲಿ ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದಾಗಿದ್ದು, ಈ ದಿಸೆಯಲ್ಲಿ DHRUV64 ಪ್ರಮುಖ ಪಾತ್ರ ವಹಿಸುತ್ತಿದೆ.* DHRUV64 ಭಾರತದ ಆತ್ಮನಿರ್ಭರ ಭಾರತ ದೃಷ್ಟಿಕೋನದ ಸ್ಪಷ್ಟ ಪ್ರತೀಕವಾಗಿದೆ. MeitY, C-DAC, ಅಕಾಡೆಮಿಯಾ ಮತ್ತು ಕೈಗಾರಿಕೆಗಳ ಸಂಯುಕ್ತ ಪ್ರಯತ್ನದಿಂದ ಭಾರತವು ಸ್ವದೇಶಿ ಪ್ರೊಸೆಸರ್ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ದೃಢವಾದ ಹಾದಿಯಲ್ಲಿ ಸಾಗುತ್ತಿದೆ. THEJAS32 ರಿಂದ DHRUV64 ತನಕ ಮತ್ತು ಮುಂದಿನ DHANUSH ಸರಣಿಯವರೆಗೆ, ಭಾರತವು ತಂತ್ರಜ್ಞಾನಾತ್ಮಕ ಸ್ವಾವಲಂಬನೆಯತ್ತ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ.