* ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎರಡನೇ ಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.* ಮುಖ್ಯಮಂತ್ರಿಗಳ ಜನಪ್ರಿಯತೆಯನ್ನು ಅಳೆಯಲು ನಡೆಸಿದ ಈ ಸಮೀಕ್ಷೆಯಲ್ಲಿ ಶೇ. 52.7 ರೇಟಿಂಗ್‌ನೊಂದಿಗೆ ಪಟ್ನಾಯಕ್ ಮೊದಲ ಸ್ಥಾನ ಪಡೆದಿದ್ದಾರೆ. ಯೋಗಿ ಆದಿತ್ಯನಾಥ್ ಅವರಿಗೆ ಶೇ. 52.3 ರೇಟಿಂಗ್ ಲಭಿಸಿದೆ. - 1ನೇ ಸ್ಥಾನದಲ್ಲಿರುವ ಒಡಿಶಾ  ಮುಖ್ಯಮಂತ್ರಿ 'ನವೀನ್ ಪಟ್ನಾಯಕ್'- 2ನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ 'ಯೋಗಿ ಆದಿತ್ಯನಾಥ್'- 3ನೇ ಸ್ಥಾನದಲ್ಲಿರುವ ಅಸ್ಸಾಂನ ಮುಖ್ಯಮಂತ್ರಿ 'ಹಿಮಂತ ಬಿಸ್ವಾ ಶರ್ಮಾ'- 4ನೇ ಸ್ಥಾನದಲ್ಲಿರುವ ಗುಜರಾತ್‌ ಮುಖ್ಯಮಂತ್ರಿ 'ಭೂಪೇಂದ್ರ ಪಟೇಲ್'- 5ನೇ ಸ್ಥಾನದಲ್ಲಿರುವ ತ್ರಿಪುರಾ ಮುಖ್ಯಮಂತ್ರಿ 'ಡಾ.ಮಾಣಿಕ್ ಸಹಾ'